Monday, June 1, 2026
Homeಕ್ರೈಮ್ಎನ್.ಆ‌ರ್.ಪುರ: ಗುಡುಗು ಸಿಡಿಲಿನ ಆರ್ಭಟ: ದಂಪತಿಗೆ ಗಾಯ, ಆಸ್ಪತ್ರೆಗೆ ದಾಖಲು!

ಎನ್.ಆ‌ರ್.ಪುರ: ಗುಡುಗು ಸಿಡಿಲಿನ ಆರ್ಭಟ: ದಂಪತಿಗೆ ಗಾಯ, ಆಸ್ಪತ್ರೆಗೆ ದಾಖಲು!

ಎನ್.ಆ‌ರ್.ಪುರ: ಕಾಫಿನಾಡಿನಲ್ಲಿ ಮುಂಗಾರುಪೂರ್ವ ಮಳೆಯ ಅಬ್ಬರ ಜೋರಾಗಿದ್ದು, ಗುಡುಗು ಸಿಡಿಲಿನ ಆರ್ಭಟಕ್ಕೆ ದಂಪತಿ ಗಾಯಗೊಂಡಿರುವ ಘಟನೆ ನರಸಿಂಹರಾಜಪುರ ತಾಲೂಕಿನ ಸೀಗುವಾನಿ ಗ್ರಾಮದಲ್ಲಿ ಸಂಭವಿಸಿದೆ.

ಮಂಜುನಾಥ ಮತ್ತು ಮಮತಾ ಎಂಬ ದಂಪತಿ ಎನ್.ಆರ್.ಪುರ ಪಟ್ಟಣದಿಂದ ತಮ್ಮ ಮನೆಗೆ ಹಿಂತಿರುಗುತ್ತಿದ್ದಾಗ ಹಠಾತ್ ಮಳೆ ಸುರಿದಿದೆ. ಇದರಿಂದ ರಕ್ಷಣೆ ಪಡೆಯಲು ಸೀಗುವಾನಿ ಗ್ರಾಮದ ಬಸ್ ತಂಗುದಾಣದಲ್ಲಿ ಆಶ್ರಯ ಪಡೆದಿದ್ದರು.

ದಂಪತಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಸಂದರ್ಭದಲ್ಲಿಯೇ ಅದರ ಪಕ್ಕದಲ್ಲಿ ಸಿಡಿಲು ಅಪ್ಪಳಿಸಿದೆ. ಅದೃಷ್ಟವಶಾತ್ ಸಿಡಿಲು ನೇರವಾಗಿ ಬಡಿಯದ ಕಾರಣ ದಂಪತಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರಾದರೂ, ಅದರ ತೀವ್ರತೆಗೆ ಸಣ್ಣಪುಟ್ಟ ಗಾಯಗಳಾಗಿವೆ.

ಗಾಯಾಳುಗಳಿಗೆ ತಕ್ಷಣವೇ ಎನ್.ಆ‌ರ್.ಪುರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!