ಮೂಡಿಗೆರೆ : ಶ್ರೀ ಶಾಸ್ತ ಕ್ರಿಕೆಟರ್ಸ್ ವತಿಯಿಂದ ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ಲೆಜೆಂಡ್ಸ್ ಕಪ್ ಕ್ರೀಡಾಕೂಟ ಇಡೀ ರಾಜ್ಯದಲ್ಲಿ ಮಾದರಿ ಪಂದ್ಯಕೂಟ ಎಂದು ಕೆಂಪೇಗೌಡ ಒಕ್ಕಲಿಗ ವೇದಿಕೆ ತಾಲ್ಲೂಕು ಅಧ್ಯಕ್ಷ ಬ್ರಿಜೆಶ್ ಗೌಡ ಕಡಿದಾಳು ಅವರು ಹೇಳಿದರು
ಅವರು ಕ್ರೀಡಾಕೂಟದ ಸಮಾರೂಪ ಸಮಾರಂಭದ ವೇದಿಕೆ ಕಾರ್ಯಕ್ರಮ ದಲ್ಲಿ ಮಾತನಾಡಿದರು, ಗ್ರಾಮೀಣ ಭಾಗದ ಯುವಕರಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸಲು ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾಕೂಟಗಳನ್ನು ಹೆಚ್ಚಾಗಿ ಆಯೋಜಿಸುವ ಅಗತ್ಯವಿದೆ. ಇದರ ಜೊತೆಗೆ 35 ವರ್ಷ ಮೇಲ್ಪಟ್ಟ ಹಳೇ ಆಟಗಾರರನ್ನು ಮತ್ತೆ ಒಂದುಗೂಡಿಸುವ ಕಾರ್ಯಕ್ಕೆ ಕೈ ಹಾಕಿದ ಆಯೋಜಕ ಸುಜೀರ್ ಕಡಿದಾಳು ಅವರ ಆಲೋಚನೆ ಕುರಿತು ಶ್ಲಾಘನೆ ವ್ಯಕ್ತ ಪಡಿಸಿದರು.
ಮುಂದಿನ ದಿನಗಳಲ್ಲಿ ತಾಲೂಕಿನ ಯಾವುದೇ ಭಾಗದಲ್ಲಿ ಲೆಜೆಂಡ್ಸ್ ಕಪ್ ಕ್ರೀಡಾಕೂಟಗಳಿಗೆ ತಮ್ಮ ಸಂಪೂರ್ಣ ಸಹಕಾರವಿರುವುದಾಗಿ ತಿಳಿಸಿದ ಅವರು ಹೆಚ್ಚು ಗ್ರಾಮೀಣ ಪ್ರದೇಶಗಳ ಪ್ರತಿಭಾವಂತ ಆಟಗಾರರಿಗೆ ಕ್ರಿಕೆಟ್ ಪಂದ್ಯಾವಳಿಗಳು ಉತ್ತಮ ಅವಕಾಶಗಳನ್ನು ಒದಗಿಸುತ್ತವೆ, ಲೆಜೆಂಡ್ಸ್ ಕಪ್ ಕ್ರೀಡಾಕೂಟ ಗಳಿಂದ ಹಳೇ ಸ್ನೇಹ ಸಂಬಂಧ ಶಾಶ್ವತ ವಾಗಿ ಉಳಿಯುತ್ತದೆ. ಇಂತಹ ಸ್ನೇಹ ಸಂಬಂಧಗಳು ಘಟ್ಟೀಯಾಗಿ ಉಳಿಯಲು ಉದಾರ ಮನಸಿನ ದಾನಿಗಳು ಒಂದು ರೀತಿಯಲ್ಲಿ ಕಾರಣಕರ್ತರಾಗುತ್ತಾರೆ ಅಂತವರ ಸಾಲಿನಲ್ಲಿ ಶ್ರೀಯುತ ಮನು ಗೌಡ್ರು ಮಾಕೋನಹಳ್ಳಿ ಪ್ರಮುಖ ಸಾಲಿನಲ್ಲಿ ಇರುತ್ತಾರೆ.
ಗ್ರಾಮೀಣ ಭಾಗದ ಜನರನ್ನು ಕ್ರೀಡಾ ಸಂಸ್ಕೃತಿಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಲೆಜೆಂಡ್ಸ್ ಕಪ್ ಕ್ರೀಡಾಕೂಟ ಮಹತ್ವದ ಹೆಜ್ಜೆಯಾಗಿದೆ’ ಎಂದು ತಿಳಿಸಿದರು.
ದಾರದಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ವಿಕ್ರಂ ಮಾತನಾಡಿ ಯುವಕರು ದುಶ್ಚಟಗಳಿಗೆ ಬಲಿಯಾಗದೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
‘ಕ್ರೀಡೆಗಳು ಯುವಕರಲ್ಲಿ ಶಿಸ್ತು, ಸಮಯ ಪ್ರಜ್ಞೆ, ತಂಡದ ಮನೋಭಾವ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುತ್ತವೆ. ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಗುಣವನ್ನು ಕ್ರೀಡೆಗಳು ಕಲಿಸುತ್ತವೆ, ಮೂಡಿಗೆರೆ ಲೆಜೆಂಡ್ಸ್ ಕ್ರಿಕೆಟ್ ಪ್ರಿಮಿಯರ್ ಲೀಗ್- ಪಂದ್ಯಾವಳಿಯು ಹಳೇ ಆಟಗಾರರನ್ನು ಒಗ್ಗೂಡಿಸಿ ಸವಿ ನೆನಪುಗಳನ್ನು ಮೆಲುಕು ಹಾಕಿಸಲು ಪ್ರಮುಖ ಕಾರಣವಾಗಿದೆ ಎಂದರು.
ಕ್ರೀಡಾಕೂಟದಲ್ಲಿ 8 ತಂಡಗಳು ಭಾಗವಹಿಸಿದ್ದು ದಾರದಹಳ್ಳಿ ಪ್ರಥಮ ಹಾಗೂ ಕಡಿದಾಳು ತಂಡ ದ್ವಿತೀಯ ಸ್ಥಾನ. ಮಾಕೋನಹಳ್ಳಿ ತೃತೀಯ ಹಾಗೂ ಕಣಚೂರು ತಂಡ ಚತುರ್ಥ ಸ್ಥಾನ ಪಡೆದು ಜಯಭೇರಿ ಕಿರೀಟ ತಮ್ಮದಾಗಿಸಿಕೊಂಡವು.
ಈ ಸಂದರ್ಭದಲ್ಲಿ ಸಂದೀಪ್ ಜೇನುಬೈಲ್, ಸಂಜಯ್ ಕಡಿದಾಳು, ಮಾಜಿ ಸೈನಿಕ ಪವನ್, ಅರುಣ್ ಕಣಚೂರು, ರವಿ ಕಣಚೂರು, ಕಾರ್ತಿಕ್ ಮಾಕೋನಹಳ್ಳಿ, ಪುಟ್ಟಣ್ಣ ಕಣಚೂರು, ಪ್ರಸಾದ್ ದಾರದಹಳ್ಳಿ, ಸುಧಾಕರ್ ಕಡಿದಾಳು ಆಯೋಜಕರಾದ ಮಧು ಹೆಗ್ಗರವಳ್ಳಿ ಸೇರಿದಂತೆ
ಕ್ರೀಡಾಭಿಮಾನಿಗಳು, ಆಟಗಾರರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ:ಪುನೀತ್ ಕಡಿದಾಳು
9483811948
