Monday, September 14, 2026
Homeಕ್ರೈಮ್cheetah attack: ಹಾಸನದಲ್ಲಿ ನಾಲ್ವರು ರೈತರ ಮೇಲೆ‌ ಚಿರತೆ ದಾಳಿ‌

cheetah attack: ಹಾಸನದಲ್ಲಿ ನಾಲ್ವರು ರೈತರ ಮೇಲೆ‌ ಚಿರತೆ ದಾಳಿ‌

Telegram Group
Join Now

ಹಾಸನ ಜಿಲ್ಲೆ ಜನರು ನಿದ್ದೆಯಲ್ಲೂ ಬೆಚ್ಚಿ ಬೀಳುವಂತಾಗಿದೆ. ಚಿರತೆಗಳು ಮರಿಗಳೊಂದಿಗೆ ನಾಡಿಗೆ ಲಗ್ಗೆ ಇಟ್ಟಿದ್ದು,  ಹೊಳೆನರಸೀಪುರ ತಾಲೂಕಿನ ಅಂಕವಳ್ಳಿಯಲ್ಲಿ ನಾಲ್ವರ ಮೇಲೆ‌ ಚಿರತೆ ದಾಳಿ‌ ನಡೆಸಿದೆ (cheetah attack in hassan).

ಬೆಳಗ್ಗೆ ಜಮೀನಿನಲ್ಲಿ ಕೆಲಸಕ್ಕೆ ತೆರಳಿದ್ದ ವೇಳೆ ಏಕಾಏಕಿ ಚಿರತೆ ದಾಳಿ ಮಾಡಿದೆ. ಗ್ರಾಮದ ರೈತ ನವೀನ್(40), ನಾಗರಾಜ್(55) ಮತ್ತು ಜಯಮ್ಮ(70) ಮೇಲೆ ದಾಳಿ ಮಾಡಿದ್ದು, ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಗಾಯಾಳು ರೈತರನ್ನು ಹೊಳೆನರಸೀಪುರ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.

ಚಿರತೆ ದಾಳಿಯಿಂದಾಗಿ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಮುಂಜಾನೆಯೇ ಎದ್ದು ಜಮೀನು, ಗದ್ದೆ, ತೋಟಕ್ಕೆ ತೆರಳಲು ರೈತರು ಭಯಪಡುತ್ತಿದ್ದಾರೆ. ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ತೆರಳಲು ಆತಂಕ ಪಡುವಂತಾಗಿದ್ದು, ಒಂಟಿಯಾಗಿ ತೆರಳದೆ ಗುಂಪು, ಗುಂಪಾಗಿ ತೆರಳುವ ಪರಿಹಾರ ಮಾರ್ಗವನ್ನು ಕಂಡುಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!