Sunday, July 26, 2026
Homeಕ್ರೈಮ್MESCOM suffers: ಚಿಕ್ಕಮಗಳೂರಲ್ಲಿ ಮುಂಗಾರುಪೂರ್ವ ಮಳೆ ಆರ್ಭಟಕ್ಕೆ 3.21 ಕೋಟಿ ರೂ. ಮೆಸ್ಕಾಂ ಆಸ್ತಿಪಾಸ್ತಿ ನಷ್ಟ!

MESCOM suffers: ಚಿಕ್ಕಮಗಳೂರಲ್ಲಿ ಮುಂಗಾರುಪೂರ್ವ ಮಳೆ ಆರ್ಭಟಕ್ಕೆ 3.21 ಕೋಟಿ ರೂ. ಮೆಸ್ಕಾಂ ಆಸ್ತಿಪಾಸ್ತಿ ನಷ್ಟ!

Telegram Group
Join Now

ಚಿಕ್ಕಮಗಳೂರು: ಮುಂಗಾರುಪೂರ್ವ ಮಳೆ ಮತ್ತು ಭಾರಿ ಗಾಳಿಯ ಆರ್ಭಟಕ್ಕೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮೆಸ್ಕಾಂ ವ್ಯಾಪ್ತಿಯಲ್ಲಿ ಭಾರಿ ಪ್ರಮಾಣದ ಆಸ್ತಿಪಾಸ್ತಿ ಹಾನಿ ಸಂಭವಿಸಿದೆ.

ಏಪ್ರಿಲ್ ಒಂದರಿಂದ ಜೂನ್ ಒಂದರವರೆಗೆ ಮೆಸ್ಕಾಂ ಅಂಕಿ ಅಂಶಗಳ ಪ್ರಕಾರ ಪ್ರಕೃತಿಯ ವಿಕೋಪಕ್ಕೆ ಜಿಲ್ಲೆಯಲ್ಲಿ ಬರೋಬ್ಬರಿ 3.21 ಕೋಟಿ ರೂಪಾಯಿಗಳಿಗೂ ಅಧಿಕ ನಷ್ಟ ಉಂಟಾಗಿದ್ದು ದೊಡ್ಡ ಹೊಡೆತ ಬಿದ್ದಿದೆ. ಜಿಲ್ಲೆಯಾದ್ಯಂತ ಬೀಸಿದ ಬಿರುಗಾಳಿಗೆ ಸಿಲುಕಿ ಒಟ್ಟು 1881 ವಿದ್ಯುತ್ ಕಂಬಗಳು ಧರೆಗುರುಳಿವೆ.

ಕಂಬಗಳು ನೆಲಕಚ್ಚಿದ್ದಲ್ಲದೆ, ಜಿಲ್ಲೆಯ ಒಟ್ಟು 37.62 ಕಿಲೋಮೀಟರ್ ಉದ್ದದ ವಿದ್ಯುತ್ ಮಾರ್ಗಗಳು ಸಂಪೂರ್ಣವಾಗಿ ಹಾನಿಗೀಡಾಗಿದೆ ಇದರಿಂದಾಗಿ ಜಿಲ್ಲೆಯ ಹಲವು ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿತ್ತು. ಆದರೆ ಮೆಸ್ಕಾಂ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗಿ ಯುದ್ಧೋಪಾದಿಯಲ್ಲಿ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.

ಹಾನಿಗೊಳಗಾಗಿದ್ದ ಎಲ್ಲಾ 37.62 ಕಿಲೋಮೀಟರ್ ವಿದ್ಯುತ್ ಮಾರ್ಗಗಳನ್ನು ಸರಿಪಡಿಸಲಾಗಿದ್ದು, ಬಿದ್ದಿದ್ದ ಕಂಬಗಳ ಜಾಗದಲ್ಲಿ ಹೊಸ ಕಂಬಗಳನ್ನು ಅಳವಡಿಸುವ ಮೂಲಕ ಬಹುತೇಕ ಕಡೆಗಳಲ್ಲಿ ವಿದ್ಯುತ್ ಸಮಸ್ಯೆಯನ್ನು ಯಶಸ್ವಿಯಾಗಿ ಬಗೆಹರಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments