ಚಿಕ್ಕಮಗಳೂರು : ಬೈಕ್ ಜೋರಾಗಿ ಓಡಿಸಿದ್ದಕ್ಕೆ ಬಿಜೆಪಿ ಮುಖಂಡನಿಂದ ಯುವಕನ ಕೈ ಮುರಿದು, ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿ ನಡೆದಿದೆ.
ಬಿಜೆಪಿ ಮುಖಂಡ ಸಂತೋಷ್ ಮಾಳೆಯಿಂದ ಯುವಕ ಮಹಮದ್ ಜೈದ್ ಎಂಬುವನಿಗೆ ಮಾರಣಾಂತಿಕ ಹಲ್ಲೆ ಮಾಡಿರುತ್ತಾನೆ. ಮೈತುಂಬಾ ರಕ್ತ ಹೆಪ್ಪುಗಟ್ಟುವಂತೆ ಹೊಡೆದಿರೋ ಸಂತೋಷ್ ಮಾಳೆ ತಮ್ಮನನ್ನ ಶಾಲೆಯಿಂದ ಕರೆತರಲು ಸ್ಕೂಟಿಯಲ್ಲಿ ಹೋಗಿದ್ದ ಜೈದ್ ಶಾಲೆ ಬಿಟ್ಟಿಲ್ಲ ಎಂದು 2-3 ಸಲ ಶಾಲೆ ಬಳಿ ಓಡಾಡಿದ್ದ ಜೈದ್ ಬೈಕ್ ಸ್ಪೀಡಾಗಿ ಓಡಿಸ್ತೀಯಾ ಎಂದು ಜೈದ್ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ಮಾಡಿರೋ ಸಂತೋಷ್
ಮಧ್ಯರಾತ್ರಿವರೆಗೂ ಠಾಣೆ ಬಳಿ ಜಮಾಯಿಸಿದ್ದ ನೂರಾರು ಮುಸ್ಲಿಮರು ಕಾಫಿನಾಡ ಅಜ್ಜಂಪುರದಲ್ಲಿ ಬೂದಿಮುಚ್ಚಿದ ಕೆಂಡದಂತಹಾ ಪರಿಸ್ಥಿತಿ.ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಆರೋಪಿ ಸಂತೋಷ್ ವಿರುದ್ಧ ಪ್ರಕರಣ ದಾಖಲಾಗಿ ನಾಪತ್ತೆಯಾಗಿರುವ ಆರೋಪಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
