Friday, June 26, 2026
Homeಕ್ರೈಮ್Medal Announcement: ಹಾಸನ ಜಿಲ್ಲೆಯ ವಿವಿಧ ಪೊಲೀಸ್ ಅಧಿಕಾರಿಗಳಿಗೆ ಡಿಜಿ ಐಜಿಪಿ ಪದಕ ಘೋಷಣೆ!

Medal Announcement: ಹಾಸನ ಜಿಲ್ಲೆಯ ವಿವಿಧ ಪೊಲೀಸ್ ಅಧಿಕಾರಿಗಳಿಗೆ ಡಿಜಿ ಐಜಿಪಿ ಪದಕ ಘೋಷಣೆ!

ಹಾಸನ: ರಾಜ್ಯದ 17 IPS ಅಧಿಕಾರಿಗಳು ಸೇರಿ 200 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ 3ನೇ ವರ್ಷದ ಡಿಜಿ-ಐಜಿಪಿ ಪದಕವನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ. ಎ. ಸಲೀಂ ಅವರು ಘೋಷಣೆ ಮಾಡಿದ್ದಾರೆ.

ಹಾಸನ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಆರು ಪೊಲೀಸ್​ ಸಿಬ್ಬಂದಿಗೆ ಡಿಜಿ-ಐಜಿಪಿ ಪದಕ ಘೋಷಣೆಯಾಗಿದ್ದು, ಜಿಲ್ಲೆಯ ಪೊಲೀಸ್ ಇಲಾಖೆ ಗೌರವವನ್ನು ಇಮ್ಮಡಿಗೊಳಿಸಿದೆ.

ಕಳೆದ ಮೂರು ವರ್ಷಗಳ ಹಿಂದೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಅಲೋಕ್ ಮೋಹನ್ ಅವರು ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಡಿಜಿ-ಐಜಿಪಿ ಪದಕ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದರು.

ಹಾಸನ ಜಿಲ್ಲೆಯ ವಿವಿಧ ಪೊಲೀಸ್ ಅಧಿಕಾರಿಗಳು ಮತ್ತು ನೌಕರರಿಗೆ ಈ ಪದಕಗಳು ಲಭಿಸಿದ್ದು, ಅವರ ಪಟ್ಟಿ ಇಲ್ಲಿದೆ.

  • ಶುಭಾನ್ವಿತಾ, ಐಪಿಎಸ್, ಎಸ್ಪಿ, ಹಾಸನ ಜಿಲ್ಲೆ.
  • ಶ್ರೀನಿಧಿ ಎನ್, ಅಪರ ಎಸ್ಪಿ, ಹಾಸನ ಜಿಲ್ಲೆ.
  • ಶಿಲ್ಪಾ ಕೆ., ಪಿಐ, ಕೆಎಲ್ಎ ಹಾಸನ.
  • ಅರುಣ್ ಕುಮಾರ್. ಹೆಚ್.ಬಿ., ಪಿಐ, ಅರಸೀಕೆರೆ ಗ್ರಾಮಾಂತರ ವೃತ್ತ, ಹಾಸನ ಜಿಲ್ಲೆ.
  • ರಂಗಸ್ವಾಮಿ ಹೆಚ್.ಜಿ., ಸಿಎಚ್​ಸಿ, ಕೆಎಲ್ಎ ಹಾಸನ.
  • ಯಶವಂತಕುಮಾರ್ ಕೋನೆಸಾಗರ್, ವಿಶೇಷ ಆರ್​ಪಿಐ 11ನೇ ಬೆಟಾಲಿಯನ್ ಕೆಎಸ್ಆರ್​ಪಿ, ಹಾಸನ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments