ಹಾಸನ: ರಾಜ್ಯದ 17 IPS ಅಧಿಕಾರಿಗಳು ಸೇರಿ 200 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ 3ನೇ ವರ್ಷದ ಡಿಜಿ-ಐಜಿಪಿ ಪದಕವನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ. ಎ. ಸಲೀಂ ಅವರು ಘೋಷಣೆ ಮಾಡಿದ್ದಾರೆ.
ಹಾಸನ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಆರು ಪೊಲೀಸ್ ಸಿಬ್ಬಂದಿಗೆ ಡಿಜಿ-ಐಜಿಪಿ ಪದಕ ಘೋಷಣೆಯಾಗಿದ್ದು, ಜಿಲ್ಲೆಯ ಪೊಲೀಸ್ ಇಲಾಖೆ ಗೌರವವನ್ನು ಇಮ್ಮಡಿಗೊಳಿಸಿದೆ.
ಕಳೆದ ಮೂರು ವರ್ಷಗಳ ಹಿಂದೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಅಲೋಕ್ ಮೋಹನ್ ಅವರು ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಡಿಜಿ-ಐಜಿಪಿ ಪದಕ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದರು.
ಹಾಸನ ಜಿಲ್ಲೆಯ ವಿವಿಧ ಪೊಲೀಸ್ ಅಧಿಕಾರಿಗಳು ಮತ್ತು ನೌಕರರಿಗೆ ಈ ಪದಕಗಳು ಲಭಿಸಿದ್ದು, ಅವರ ಪಟ್ಟಿ ಇಲ್ಲಿದೆ.
- ಶುಭಾನ್ವಿತಾ, ಐಪಿಎಸ್, ಎಸ್ಪಿ, ಹಾಸನ ಜಿಲ್ಲೆ.
- ಶ್ರೀನಿಧಿ ಎನ್, ಅಪರ ಎಸ್ಪಿ, ಹಾಸನ ಜಿಲ್ಲೆ.
- ಶಿಲ್ಪಾ ಕೆ., ಪಿಐ, ಕೆಎಲ್ಎ ಹಾಸನ.
- ಅರುಣ್ ಕುಮಾರ್. ಹೆಚ್.ಬಿ., ಪಿಐ, ಅರಸೀಕೆರೆ ಗ್ರಾಮಾಂತರ ವೃತ್ತ, ಹಾಸನ ಜಿಲ್ಲೆ.
- ರಂಗಸ್ವಾಮಿ ಹೆಚ್.ಜಿ., ಸಿಎಚ್ಸಿ, ಕೆಎಲ್ಎ ಹಾಸನ.
- ಯಶವಂತಕುಮಾರ್ ಕೋನೆಸಾಗರ್, ವಿಶೇಷ ಆರ್ಪಿಐ 11ನೇ ಬೆಟಾಲಿಯನ್ ಕೆಎಸ್ಆರ್ಪಿ, ಹಾಸನ.
