Tuesday, June 30, 2026
Homeಜಿಲ್ಲಾಸುದ್ದಿBidadi Township Issue: ಬಿಡದಿ ಟೌನ್ ಶಿಫ್ ವಿಚಾರ : ರೈತರ ಪರವಾಗಿ ಬಿಜೆಪಿ ಇರುತ್ತೆ:...

Bidadi Township Issue: ಬಿಡದಿ ಟೌನ್ ಶಿಫ್ ವಿಚಾರ : ರೈತರ ಪರವಾಗಿ ಬಿಜೆಪಿ ಇರುತ್ತೆ: ಪ್ರೀತಮ್ ಜೆ ಗೌಡ

ಹಾಸನ: ಬಿಡದಿ ಟೌನ್‌ಶಿಪ್ ವಿಚಾರ ಯಾವುದೇ ಪಕ್ಷದ ಹೋರಾಟವಲ್ಲ. ಇದು ರೈತರ ಹೋರಾಟ, ರೈತರ ಪರವೇ ಬಿಜೆಪಿ ನಿಲುವು ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಮಹತ್ವದ ಹೇಳಿಕೆ ನೀಡಿದ್ದಾರೆ.

ಬಿಡದಿ ಸ್ಮಾರ್ಟ್ ಸಿಟಿ ಟೌನ್‌ಶಿಪ್ ಭೂಸ್ವಾಧೀನ ವಿವಾದದ ಕುರಿತು ಮಾತನಾಡಿದ ಅವರು, “ಬಿಡದಿ ಟೌನ್‌ಶಿಪ್‌ ವಿಚಾರದಲ್ಲಿ ಭಾರತೀಯ ಜನತಾ ಪಾರ್ಟಿ ಮೊದಲಿನಿಂದಲೂ ಅನ್ನ ನೀಡುವ ರೈತರ ಪರವಾಗಿಯೇ ಇದೆ. ರೈತರ ಹಿತ ಕಾಯುವ ವಿಷಯದಲ್ಲಿ ನಮ್ಮ ನಿಲುವನ್ನು ನಾವು ಈಗಾಗಲೇ ಸ್ಪಷ್ಟವಾಗಿ ವ್ಯಕ್ತಪಡಿಸಿದ್ದೇವೆ. ಈ ಸಂಬಂಧ ಮುಂದಿನ ದಿನಗಳಲ್ಲಿ ಯಾವ ರೀತಿಯಾಗಿ ಪ್ರತಿಭಟನೆ ಹಾಗೂ ಹೋರಾಟಗಳನ್ನು ಹಮ್ಮಿಕೊಳ್ಳಬೇಕು ಎಂಬುದರ ಬಗ್ಗೆ ಪಕ್ಷದ ಹಿರಿಯ ನಾಯಕರು ಒಟ್ಟಾಗಿ ಕುಳಿತು ತೀರ್ಮಾನ ಮಾಡಲಿದ್ದಾರೆ” ಎಂದರು.

ಇನ್ನು ಬಿಡದಿಯ ಬೈರಮಂಗಲದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಬಹಿರಂಗ ಚರ್ಚೆಗಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗಾಗಿ ಕಾಯುತ್ತಾ ಕುಳಿತಿರುವ ವಿಚಾರದ ಕುರಿತು ಕೇಳಲಾದ ಪ್ರಶ್ನೆಗೆ ತೀಕ್ಷ್ಣವಾಗಿ ಉತ್ತರಿಸಿದ ಪ್ರೀತಂ ಗೌಡ, “ಎಚ್‌ಡಿಕೆ ಅವರು ಡಿಕೆಶಿಗಾಗಿ ವೇಯ್ಟಿಂಗ್ ಮಾಡ್ತಿರೋದನ್ನು ಜೆಡಿಎಸ್‌ನವರಿಗೇ ಕೇಳಿ, ಅದಕ್ಕೂ ನಮಗೂ ಸಂಬಂಧವಿಲ್ಲ” ಎಂದು ಹೇಳುವ ಮೂಲಕ ಜಾರಿಕೊಂಡಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments