ಮೂಡಿಗೆರೆ: ಗಾಳಿ-ಮಳೆಗೆ ರಸ್ತೆಗೆ ಬೃಹತ್ ಗಾತ್ರದ ಮರ ಅಡ್ಡಲಾಗಿ ಬಿದ್ದ ಪರಿಣಾಮ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ 10ನೇ ತಿರುವಿನಲ್ಲಿ ಕಂಡಯ ಬಂದಿದೆ.
ಹೌದು .. ಚಿಕ್ಕಮಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಾಗಿದ್ದು ಸುಮಾರು 3 ಕಿ.ಮೀ. ಟ್ರಾಫಿಕ್ ಜಾಮ್ ಆಗಿದ್ದು ನಿಂತಲ್ಲೇ ನಿಂತಿರುವ ಪ್ರಯಾಣಿಕರ ವಾಹನಗಳು, ವಾಹನ ಸವಾರರು ಪರದಾಟ ಅನುಭವಿಸಿದರು.
ಸ್ಥಳಕ್ಕೆ ಪೊಲೀಸರು, ಸಮಾಜ ಸೇವಕರ ತಂಡ ಭೇಟಿ ನೀಡಿ ಮರ ತೆರವು ಕಾರ್ಯಾಚರಣೆ ನಡೆಸಿದ್ದು ಜಿಟಿ-ಜಿಟಿ ಮಳೆ ನಡುವೆಯೇ ಸ್ಥಳಿಯರ ಜೊತೆ ಪ್ರಯಾಣಿಕರು ಕೈ ಜೋಡಿಸಿ ಬೃಹತ್ ಗಾತ್ರ ಮರ ತೆರವು ಕಾರ್ಯಾಚರಣೆ ಮಾಡಿದರು.
