ಬೇಲೂರು: ಅಡ್ಡ ಮತದಾನ ಆರೋಪಗಳಿಗೆ ಸಂಬಂಧಿಸಿದಂತೆ ಶಾಸಕ ಎಚ್.ಕೆ. ಸುರೇಶ್ ಅವರು ಮಂಗಳವಾರ ತಮ್ಮ ನಿವಾಸದಿಂದ ಬರಿಗಾಲಿನಲ್ಲಿ ನಡೆದುಕೊಂಡು ಬಂದು ಹಾಸನ ಜಿಲ್ಲೆ ಬೇಲೂರಿನ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ದೇವಾಲಯದ ಬಲಿಪೀಠದ ಬಳಿ ಆಣೆ ಮಾಡಿ, “ನಾನು ಯಾವುದೇ ರೀತಿಯ ಪಕ್ಷದ್ರೋಹ ಮಾಡಿಲ್ಲ. ಪಕ್ಷದ ವರಿಷ್ಠರು ನೀಡಿದ ಸೂಚನೆಯಂತೆ ಮತದಾನ ಮಾಡಿದ್ದೇನೆ. ಶ್ರೀ ಚನ್ನಕೇಶವ ಸ್ವಾಮಿ, ನನ್ನ ತಾಯಿ ಹಾಗೂ ಬೇಲೂರು ತಾಲೂಕಿನ ಸಮಸ್ತ ಮತದಾರರನ್ನು ಸಾಕ್ಷಿಯಾಗಿ ಹೇಳುತ್ತಿದ್ದೇನೆ” ಎಂದು ಘೋಷಿಸಿದರು.
ಇದೇ ವೇಳೆ, ತಮ್ಮ ಹೇಳಿಕೆಗೆ ಮತ್ತಷ್ಟು ದೃಢತೆ ನೀಡುವ ಉದ್ದೇಶದಿಂದ ಸಾವಿರಾರು ಬೆಂಬಲಿಗರೊಂದಿಗೆ ಧರ್ಮಸ್ಥಳಕ್ಕೆ ತೆರಳಿ ಅಲ್ಲಿಯೂ ಆಣೆ ಮಾಡುವುದಾಗಿ ತಿಳಿಸಿದರು. ಶಾಸಕ ಸುರೇಶ್ ಅವರೊಂದಿಗೆ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಅಡ್ಡ ಮತದಾನ ಆರೋಪದ ಹಿನ್ನೆಲೆಯಲ್ಲಿ ಶಾಸಕ ಸುರೇಶ್ ಅವರ ಈ ಕ್ರಮ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಚನ್ನಕೇಶವಸ್ವಾಮಿ ಪಾದ ಮುಟ್ಟಿ ನಮಸ್ಕಾರ ಮಾಡುತ್ತಾ ಚನ್ನಕೇಶವ ಸ್ವಾಮಿ ರೌಮ್ಯನಾಯಕಿ ರಂಗ ನಾಯಕಿ ದರ್ಶನ ಮಾಡಿ ಪೂರ್ವ ಜನ್ಮದ ಪುಣ್ಯ ನನಗೆ ಭಗವಂತನ ಬಲಭಾಗದಲ್ಲಿ ವಾಸಮಾಡುವ ಅವಕಾಶ ಸಿಕ್ಕಿದೆ ಕ್ಷೇತ್ರದ ಸೇವೆ ಮಾಡಲು ಅವಕಾಶ ಕೊಟ್ಟಿದಾನೆ ಯಾವುದೇ ಕರೆಯಿಲ್ಲದೆ ಸತ್ಯ ಮಾಡಲು ತೀರ್ಮಾನ ಮಾಡಿದ್ದೇನೆ.
ಚನ್ನಕೇಶವ ಸ್ವಾಮಿ ಕರಿಕಲ್ಲು ಮುಟ್ಟಿ ಪ್ರಮಾಣ ಮಾಡಿದ್ದೇನೆ ಈ ಕರಿಕಲ್ಲೇ ಸಾಕ್ಷಿ ನಾನು ಅಡ್ಡ ಮತದಾನ ಮಾಡಿಲ್ಲ ಎಂದು ಮೂರು ಬಾರಿ ಉಚ್ಚಾರ ಪಕ್ಷ ದ್ರೋಹ ಮಾಡಿಲ್ಲ ಎಂದು ಮೂರುಬಾರಿ ಉಚ್ಚಾರ ಮಾಡಿದರು.
ಇದು ಈ ಕ್ಷೇತ್ರಕ್ಕೆ ದೊಡ್ಡ ಶಡ್ಯಂತ್ರ ಈ ಕ್ಷೇತ್ರಕ್ಕೆ ಪ್ರದಾನಿಮೋದಿಯವರು ಬಂದು ಪ್ರಚಾರ ಮಾಡಿದ್ದರುಅವರಿಗೆ ಅನ್ಯಾಯ ಮಾಡಿದ್ರೆ ಭಗವಂತ ಕ್ಷಮಿಸಲ್ಲ ಆ ಪಕ್ಷದಲ್ಲಿ ಇದ್ದು ಪ್ರಮಾಣಿಕವಾಗಿ ವಿಪಕ್ಷ ನಾಯಕರು ಸೂಚಿಸಿದಂತೆ ನಾನು ಮತ ಚಲಾವಣೆ ಮಾಡಿದ್ದೇನೆ ಯಾವುದೇ ಅಡ್ಡಮತದಾನ ಮಾಡಿಲ್ಲ ಇದಕ್ಕೆ ಪರಮಾತ್ಮನೇ ಸಾಕ್ಷಿ ಎಂದು ಹೇಳುತ್ತೇನೆ.
ಭಗವಂತ ನನ್ನ ಯಾರೂ ಕೊಂಡುಕೊಳ್ಳಲು ಆಗಲ್ಲಕೊಂಡು ಕೊಳ್ಳಲು ಪ್ರೀತಿಯಿಂದ ಮಾತ್ರ ಸಾದ್ಯ ಇಷ್ಟು ಜನರ ಪ್ರೀತಿ ಮಾತ್ರದಿಂದ ಕೊಂಡುಕೊಳ್ಲಲು ಸಾದ್ಯ ಹಣದಿಂದ ದೌರ್ಜನ್ಯ ದಿಂದ ಸಾದ್ಯ ಇಲ್ಲ ಚನ್ನಕೇಶವ ವ ಬri ಕಲ್ಲಿನಮೇಲೆ ಪ್ರಮಾಣ ಮಾಡಿ ಹೇಳ್ತೆನೆ ನಾನು ಅಡ್ಡಮತದಾನ ಮಾಡಿಲ್ಲ ಎಂದು ತಿಳಿಸಿದರು.
