Friday, July 3, 2026
Homeಜಿಲ್ಲಾಸುದ್ದಿElephnent Death: ವಿದ್ಯುತ್ ಶಾಕ್ ಹೊಡೆದು ಬೃಹತ್ ಗಾತ್ರದ ಕಾಡಾನೆ ಸಾವು: ಸ್ಥಳೀಯರಲ್ಲಿ ಆತಂಕ

Elephnent Death: ವಿದ್ಯುತ್ ಶಾಕ್ ಹೊಡೆದು ಬೃಹತ್ ಗಾತ್ರದ ಕಾಡಾನೆ ಸಾವು: ಸ್ಥಳೀಯರಲ್ಲಿ ಆತಂಕ

Telegram Group
Join Now

ಮೂಡಿಗೆರೆ : ಕರೆಂಟ್ ಶಾಕ್ ನಿಂದ ಬೃಹತ್ ಗಾತ್ರದ ಕಾಡಾನೆ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ  ಮೂಡಿಗೆರೆ ತಾಲೂಕಿನ ಸಾರಗೋಡು ಮೀಸಲು ಅರಣ್ಯದಲ್ಲಿ ಸಂಭವಿಸಿದೆ.

ಹೌದು .. ಕಾಡಲ್ಲಿ ದಂತ ಹೊಂದಿದ್ದ ಬೃಹತ್ ಗಾತ್ರದ ಗಂಡಾನೆ ಮೃತದೇಹ ಪತ್ತೆಯಾಗಿದ್ದು  ಮೀಸಲು ಅರಣ್ಯದಲ್ಲಿ ವಿದ್ಯುತ್ ಹೇಗೆ ಬಂತು ಎಂಬ ಅನುಮಾನ ಈಗ ಎಲ್ಲರಲ್ಲೂ ಮೂಡಿದೆ.

ಹಾಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಭೇಟಿ, ಪರಿಶೀಲನೆ ನಡೆಸಿದ್ದು  ಕಾಡಾನೆ ಸತ್ತ ಜಾಗದಲ್ಲಿ ಸ್ಥಳ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಆನೆ ಸಾವಿಗೆ ವಿದ್ಯುತ್ ಶಾಕ್ ಕಾರಣ ಎಂದು ಪ್ರಾಥಮಿಕ ಶಂಕೆ ವ್ಯಕ್ತಪಡಿಸಲಾಗಿದೆ.

ಸ್ಥಳದಲ್ಲಿ ಪಂಚನಾಮೆ ಹಾಗೂ ಮುಂದಿನ ತನಿಖೆ ಆರಂಭಿಸಿದ ಸಿಬ್ಬಂದಿಗಳು ವಿದ್ಯುತ್ ಸಂಪರ್ಕ ಹೇಗೆ ಎಂದು ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ ಮುಂದುವರೆದಿದೆ.ಬೃಹತ್ ಗಾತ್ರದ ಕಾಡಾನೆ ಸಾವಿನಿಂದ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.

ಕಾಡಾನೆ ಸಾವಿಗೆ ಕಾರಣವಾದ ವಿದ್ಯುತ್ ಬೇಲಿ ಅಕ್ರಮವಾಗಿ ಅಳವಡಿಸಲಾಗಿತ್ತೇ ಎಂಬುದರ ಕುರಿತೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಅಕ್ರಮ ವಿದ್ಯುತ್‌ ಸಂಪರ್ಕ ಮತ್ತು ಇಲಾಖೆಯ ನಿರ್ಲಕ್ಷ್ಯದಿಂದಾಗಿ ಇಂತಹ ದುರ್ಘಟನೆಗಳು ನಡೆಯುತ್ತಿದ್ದು, ಇದರಿಂದ ವನ್ಯಜೀವಿಗಳ ಜೀವಕ್ಕೆ ಸಂಚಕಾರ ಬರುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments