Friday, July 3, 2026
Homeಜಿಲ್ಲಾಸುದ್ದಿMLA Cement Manju: ಹಳ್ಳಿಗಳಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ನಿರ್ಲಕ್ಷ್ಯ ಸಹಿಸುವುದಿಲ್ಲ: ಶಾಸಕ ಸಿಮೆಂಟ್ ಮಂಜು...

MLA Cement Manju: ಹಳ್ಳಿಗಳಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ನಿರ್ಲಕ್ಷ್ಯ ಸಹಿಸುವುದಿಲ್ಲ: ಶಾಸಕ ಸಿಮೆಂಟ್ ಮಂಜು ಖಡಕ್ ಎಚ್ಚರಿಕೆ

Telegram Group
Join Now

ಸಕಲೇಶಪುರ : ಹಳ್ಳಿಗಳಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ನಿರ್ಲಕ್ಷ್ಯ ವಹಿಸುವುದನ್ನ ಸಹಿಸುವುದಿಲ್ಲವೆಂದು ಶಾಸಕ ಸಿಮೆಂಟ್ ಮಂಜು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಹೌದು .. ಅವರು ಗುರುವಾರ ಸಕಲೇಶಪುರ ತಾಲೂಕಿನ ಐಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅಲ್ಲಿನ ಗ್ರಾಮ ಪಂಚಾಯಿತಿ ಪಿಡಿಓಗೆ ಎಚ್ಚರಿಕೆಸಹ ನೀಡಿದರು.

ಸಮರ್ಪಕ ಮಾಹಿತಿ ನೀಡಲು ವಿಫಲರಾದ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ವಾಸಿಮ್‌ಗೆ ಶಾಸಕ ತರಾಟೆ.

ಜನರು ನೀರಿಗಾಗಿ ಅಲೆದಾಡುವ ಪರಿಸ್ಥಿತಿ ಬಂದರೆ ಅಧಿಕಾರಿಗಳೇ ನೇರ ಹೊಣೆ, ಬೇಸಿಗೆ-ಮಳೆಗಾಲ ಎನ್ನದೆ ಶುದ್ಧ ಕುಡಿಯುವ ನೀರು ಒದಗಿಸುವುದು ಗ್ರಾಮ ಪಂಚಾಯಿತಿಯ ಮೊದಲ ಆದ್ಯತೆ.ಸಮಸ್ಯೆ ಬಂದ ಬಳಿಕವಲ್ಲ, ಮುಂಚಿತವಾಗಿಯೇ ಯೋಜನೆ ರೂಪಿಸಿ ಸಿದ್ಧತೆ ಮಾಡಿಕೊಳ್ಳಲು ಸೂಚನೆ. ಗ್ರಾಮಗಳ ನೀರಿನ ಮೂಲ, ಮೋಟಾರ್, ಪೈಪ್‌ಲೈನ್ ಹಾಗೂ ಟ್ಯಾಂಕ್‌ಗಳ ನಿಯಮಿತ ಪರಿಶೀಲನೆಗೆ ಆದೇಶ ನೀಡಿದರು. ಹಾಗೆ ನೀರಿ ಸಮಸ್ಯೆ ಬಗ್ಗೆ ಸಮರ್ಪಕ ಮಾಹಿತಿ ನೀಡಲು ವಿಫಲರಾದ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ವಾಸಿಮ್‌ಗೆ ಶಾಸಕರು ತರಾಟೆ ತೆಗೆದುಕೊಂಡರು.

ಜಲ ಜೀವನ್ ಮಿಷನ್ ಪೈಪ್‌ಲೈನ್‌ಗೆ ವಿದ್ಯುತ್ ಸಂಪರ್ಕ ವಿಳಂಬಕ್ಕೆ ಅಸಮಾಧಾನ ಹೊರಹಾಕಿದ ಶಾಸಕರು ಸ್ಥಳದಲ್ಲೇ ಸೆಸ್ಕಾಂ ಜೆಇಗೆ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ನಿರ್ದೇಶನ ಮಾಡಿದರು ಹಾಗೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರು ಸಂಕಷ್ಟ ಅನುಭವಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲವೆಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments