Monday, July 6, 2026
Homeಉದ್ಯಮAchievement by a young man: ಆಲ್ದೂರಿನ ಯುವಕನ ಅಪ್ರತಿಮೆ ಸಾಧನೆ: NASA ಜೊತೆ ಕೈಜೋಡಿಸಿದ...

Achievement by a young man: ಆಲ್ದೂರಿನ ಯುವಕನ ಅಪ್ರತಿಮೆ ಸಾಧನೆ: NASA ಜೊತೆ ಕೈಜೋಡಿಸಿದ ಹೆಮ್ಮೆಯ ಕನ್ನಡಿಗ!

Telegram Group
Join Now

ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ಗ್ರಾಮದ ಯುವಕ ಅವೈಸ್ ಅಹ್ಮದ್ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಸಾಧನೆ ಮಾಡಿದ್ದು, ನಾಸಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟಪ್ ‘ಪಿಕ್ಸೆಲ್’ ಸಂಸ್ಥೆಯ ಸಹ-ಸ್ಥಾಪಕರಾದ ಅವೈಸ್ ನಾಸಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಈ ಮೂಲಕ ನಾಸಾದೊಂದಿಗೆ ಒಪ್ಪಂದ ಮಾಡಿಕೊಂಡ ಮೊದಲ ಭಾರತೀಯ ಖಾಸಗಿ ಬಾಹ್ಯಾಕಾಶ ಸ್ಟಾರ್ಟಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಏನಿದು ಪಿಕ್ಸೆಲ್ ಕಂಪೆನಿ?

ಭೂಮಿಯನ್ನು ಬಹಳ ಸೂಕ್ಷ್ಮವಾಗಿ ಅಧ್ಯಯನ ಮಾಡಲು ನೆರವಾಗುವಂತಹ ಬಲಿಷ್ಠ ಉಪಗ್ರಹಗಳನ್ನು ಪಿಕ್ಸೆಲ್ ಕಂಪನಿ ನಿರ್ಮಿಸುತ್ತಿದೆ. ಇದುವರೆಗೂ ಪಿಕ್ಸೆಲ್ ಕಂಪನಿ 9 ಅತ್ಯಾಧುನಿಕ ಉಪಗ್ರಹಗಳ ಉಡಾವಣೆ ಮಾಡಿದೆ. ಇವು ಸಾಮಾನ್ಯ ಉಪಗ್ರಹಗಳಿಗಿಂತ ಭಿನ್ನವಾಗಿ, ಭೂಮಿಯ ಮೇಲಿನ ಅತಿಸೂಕ್ಷ್ಮ ಬದಲಾವಣೆಗಳನ್ನು ಪತ್ತೆ ಹಚ್ಚಬಲ್ಲವು. ರೈತರಿಗೆ ಬೆಳೆಗಳ ಆರೋಗ್ಯ ಪತ್ತೆ, ಪರಿಸರದಲ್ಲಿನ ಮೀಥೇನ್ ಅನಿಲ ಸೋರಿಕೆ ಗುರುತಿಸುವುದು, ಅಕ್ರಮ ಗಣಿಗಾರಿಕೆ ಪತ್ತೆ ಹಚ್ಚುವುದು ಮತ್ತು ಜಲಮಾಲಿನ್ಯದಂತಹ ಸಮಸ್ಯೆಗಳನ್ನು ಮೇಲ್ವಿಚಾರಣೆ ಮಾಡಲು ಈ ಉಪಗ್ರಹಗಳು ನೆರವಾಗುತ್ತವೆ. 2025 ರಲ್ಲಿ ಸಂಸ್ಥೆಯು ತನ್ನ ಆರು ‘ಫೈರ್ ಫ್ಲೈ’ (Firefly) ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.

ಸದ್ಯ ಈ ಕಂಪನಿ ಹೂಡಿಕೆದಾರರಿಂದ 960 ಕೋಟಿ ರೂ. ಹೂಡಿಕೆ ಪಡೆದಿದೆ. ಜಾಗತಿಕ ಮಟ್ಟದಲ್ಲಿ 275ಕ್ಕೂ ಹೆಚ್ಚು ಉದ್ಯೋಗಿಗಳನ್ನು ಪಿಕ್ಸೆಲ್‌ ಸಂಸ್ಥೆ ಹೊಂದಿದೆ. ಇದು ಹೈಪರ್‌ಸ್ಪೆಕ್ಟ್ರಲ್ ಇಮೇಜಿಂಗ್ ಕ್ಷೇತ್ರದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ನಿಧಿ ಪಡೆದ ಕಂಪನಿಗಳಲ್ಲಿ ಒಂದಾಗಿದೆ.

ಈಗ ಪಿಕ್ಸೆಲ್ ಸಂಸ್ಥೆಯು ನಾಸಾದೊಂದಿಗೆ ಒಪ್ಪಂದ ಮಾಡಿಕೊಂಡ ಮೊದಲ ಭಾರತೀಯ ಖಾಸಗಿ ಬಾಹ್ಯಾಕಾಶ ಸ್ಟಾರ್ಟಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಮೆರಿಕದ ನ್ಯಾಷನಲ್ ರಿಕಾನ್ನೈಸನ್ಸ್ ಆಫೀಸ್ (NRO) ಜೊತೆಗೂ ಐದು ವರ್ಷಗಳ ಒಪ್ಪಂದ ಮಾಡಿಕೊಂಡಿದೆ. ಈ ಸಂಸ್ಥೆಯನ್ನು ಟೈಮ್ (TIME) ನಿಯತಕಾಲಿಕೆಯು 2023ರ ‘100 ಅತ್ಯುತ್ತಮ ಆವಿಷ್ಕಾರಗಳಲ್ಲಿ’ ಒಂದೆಂದು ಗುರುತಿಸಿದೆ ಮತ್ತು ವಿಶ್ವ ಆರ್ಥಿಕ ವೇದಿಕೆಯು (WEF) ‘ಟೆಕ್ನಾಲಜಿ ಪಯೋನೀರ್’ ಎಂದು ಗೌರವಿಸಿದೆ.

 ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನವರು. ಇವರು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಆಲ್ದೂರಿನಲ್ಲೇ ಓದಿದ ಅವೈಸ್, ಚಿಕ್ಕಂದಿನಿಂದಲೂ ದೇಶಕ್ಕಾಗಿ ಏನಾದರೂ ಕೊಡುಗೆ ನೀಡಬೇಕು ಎಂಬ ಕನಸಿನೊಂದಿಗೇ ಮುನ್ನಡೆಯುತ್ತಿದ್ದರು. ಈಗ ತನ್ನ ಬಯಕೆಯಂತೆ ವಿಜ್ಞಾನಿಯಾಗಿ ಜಗತ್ತೇ ಭಾರತದತ್ತ ತಿರುಗಿನೋಡುವಂತೆ ಮಾಡಿದ್ದಾರೆ.  ಅವರ ಯಶೋಗಾಥೆ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.
ಸಾಲ ಮಾಡಿ, ಚಿನ್ನ ಅಡವಿಟ್ಟು ಮಗನ ಕನಸಿಗೆ ಪೋಷಕರು ನೀರೆರೆದಿದ್ದರು. ಈಗ ಪೋಷಕರ ತ್ಯಾಗಕ್ಕೆ ವಿಶ್ವಮಟ್ಟದ ಸಾಧನೆಯ ಮೂಲಕ ಪುತ್ರ ಗೌರವ ತಂದಿದ್ದಾನೆ ಎಂದು ಗ್ರಾಮಸ್ಥರು ಕೊಂಡಾಡಿದ್ದಾರೆ.
ಗ್ರಾಮೀಣ ಭಾಗದ ಪ್ರತಿಭೆಗಳು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಅವೈಸ್ ಅಹ್ಮದ್ ಅವರ ಈ ಪಯಣವೇ ಸಾಕ್ಷಿ. ಇಂಟರ್ನೆಟ್ ಇಲ್ಲದ ಬಾಲ್ಯದಿಂದ ಬಾಹ್ಯಾಕಾಶದ ಯಶಸ್ವಿ ಉದ್ಯಮಿಯವರೆಗೆ ಅವರ ಈ ಜರ್ನಿ ಸಾವಿರಾರು ಯುವಕರಿಗೆ ಸ್ಫೂರ್ತಿಯ ಸೆಲೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments