ಮೂಡಿಗೆರೆ: ತಾಲೂಕಿನಾದ್ಯಂತ ‘ಜಲಜೀವನ್ ಮಿಷನ್’ (JJM) ಯೋಜನೆಯಡಿ ಕುಡಿಯುವ ನೀರಿನ ಪೈಪ್ ಅಳವಡಿಸಲು ರಸ್ತೆಗಳನ್ನು ಬಗೆದು ಹಲವು ದಿನ ಕಳೆದಿವೆ ಆದರೆ ರಸ್ತೆಗಳನ್ನು ಸಮರ್ಪಕವಾಗಿ ಮುಚ್ಚದೆ ಅಧಿಕಾರಿಗಳು ಜಲ ಜೀವನ್ ಮಷೀನ್ ನಾಮಸ್ತಿಕೆಯಲ್ಲಿ ಜನರ ಜೀವದ ಚೆಲ್ಲಾಟ ಆಡುತ್ತಿದ್ದಾರೆ ಎಂಬುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ.
ಹೌದು ಮೂಡಿಗೆರೆ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದು
ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಬೇಜವಾಬ್ದಾರಿತನದಿಂದಾಗಿ ಪಟ್ಟಣದ ಪ್ರಮುಖ ರಸ್ತೆಗಳು ಮೃತ್ಯುಕೂಪಗಳಾಗಿ ಮಾರ್ಪಟ್ಟಿರುವುದಾಗಿ ಸ್ತಳಿಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಮುಖ್ಯ ರಸ್ತೆಗಳು, ವಸತಿ ಬಡಾವಣೆಗಳು ಹಾಗೂ ಆಸ್ಪತ್ರೆ-ಶಾಲೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಮಧ್ಯದಲ್ಲೇ ದೊಡ್ಡ ದೊಡ್ಡ ಕಂದಕಗಳನ್ನು ತೋಡಲಾಗಿದೆ. ಸರ್ಕಾರಿ ಬಾಲಿಕ ಕಾಲೇಜು ರಸ್ತೆಯಲ್ಲಿ ಚರಂಡಿ ಮುಚ್ಚದ ಕಾರಣ ಬೈಕ್ ಅಪಘಾತವಾಗಿ ಕಾಲಿಗೆ ಪೆಟ್ಟು ಬಿದ್ದು ಬೈಕ್ ಜಖಂ ಗೊಂಡಿದೆ ಎಂದು ಸಮಾಜ ಸೇವಕ ಫಿಶ್ ಮೋಣು ತಿಳಿಸಿದ್ದಾರೆ
ಕಾಮಗಾರಿ ಮುಗಿದ ನಂತರ ರಸ್ತೆಗಳನ್ನು ಮೊದಲಿನ ಸ್ಥಿತಿಗೆ ತರಬೇಕಾದ ಗುತ್ತಿಗೆದಾರರು, ಕೇವಲ ಮಣ್ಣು ಮುಚ್ಚಿ ಕೈ ತೊಳೆದುಕೊಂಡಿದ್ದಾರೆ.
ಮೂಡಿಗೆರೆ ಭಾಗದಲ್ಲಿ ಪ್ರಸ್ತುತ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಈ ಮಣ್ಣು ಕುಸಿದು, ಕೆಸರ ಗದ್ದೆಯಂತಾಗಿದ್ದು, ದಿನನಿತ್ಯ ಹತ್ತಾರು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಈಗಾಗಲೇ ಹಲವು ಸರಣಿ ಅಪಘಾತಗಳು ಸಂಭವಿಸಿದ್ದು, ಸಾರ್ವಜನಿಕರು ಆಸ್ಪತ್ರೆ ಪಾಲಾಗುತ್ತಿದ್ದಾರೆ. ಅದಲ್ಲದೆ ಮೂಡಿಗೆರೆ ನಗರದಲ್ಲಿ ಹಲವೆಡೆ ರಸ್ತೆಗಳು ಹಾಳಾಗಿದ್ದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಎಲ್ಲಾ ರಸ್ತೆ ಗುಂಡಿಗಳನ್ನು ವಾರದ ಒಳಗೆ ಮುಚ್ಚಿ ಸರಿಪಡಿಸಬೇಕು ಮುಚ್ಚದೆ ಹೀಗೆ ನಿರ್ಲಕ್ಷ ತೋರಿದರೆ ಮೂಡಿಗೆರೆ ಸಾರ್ವಜನಿಕರು,ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು
ವರದಿ: ಪುನೀತ್ ಕಡಿದಾಳು
9483811948
