ಚಿಕ್ಕಮಗಳೂರು: 2019ರ ಪ್ರವಾಹದಲ್ಲಿ ಗುಂಡಿ ಬಿದ್ದ ರಸ್ತೆಗಳು ಇಂದಿಗೂ ಅದೇ ಸ್ಥಿತಿಯಲ್ಲಿದ್ದು ಶಾಲಾಮಕ್ಕಳು, ವೃದ್ಧರು, ಮಹಿಳೆಯರು ಪರದಾಡುವಂತಾಗಿದೆ. 2019ರಲ್ಲಿ ಚಿಕ್ಕಮಗಳೂರು ಜಿಲ್ಲೆ ಶತಮಾನದ ಮಳೆ ಕಂಡಿತ್ತು.
ಒಂದೇ ರಾತ್ರಿಗೆ 22 ಇಂಚು ಮಳೆ ಸುರಿದು ಗುಡ್ಡಗಳು ಮಳೆ ತೀರಲ್ಲಿ ತೇಲಿ ಬಂದಿದ್ವು. ಗ್ರಾಮಗಳು ಅವಶೇಷವೂ ಸಿಗದಂತೆ ಕೊಚ್ಚಿ ಹೋಗಿದ್ವು. ಆದರೆ, ಮೂಡಿಗೆರೆ ತಾಲೂಕಿನ ಮಲೆಮನೆ, ಮಧುಗುಂಡಿ, ಕೆಳಗೂರು, ಜಾವಳಿ ಹಾಗೂ ಮೇಗೂರು ಭಾಗ ಅಕ್ಷರಶಃ ನರಕದಂತಹಾ ಸ್ಥಿತಿ ಕಂಡಿತ್ತು. ಭಾರೀ ಮಳೆಗೆ ರಸ್ತೆ ಸ್ಥಿತಿಯಂತು ಹೇಳ ಹೆಸರಿಲ್ಲದಂತಾಗಿತ್ತು.
6-8 ಕಿ.ಮೀ. ವ್ಯಾಪ್ತಿಯಲ್ಲಿ ಜಾವಳಿ, ಮಲೆಮನೆ, ಮಧುಗುಂಡಿ, ಮೇಗೂರು ಗ್ರಾಮಗಳಿವೆ. ನಿತ್ಯ ಈ ಭಾಗದಿಂದ ಸುಮಾರು 50ಕ್ಕೂ ಹೆಚ್ಚು ಮಕ್ಕಳು ಶಾಲಾ-ಕಾಲೇಜಿಗೆ ಓಡಾಡುತ್ತಾರೆ. ಆದರೆ, ರಸ್ತೆ ಅಡಿಯಾಳ ಗುಂಡಿ ಬಿದ್ದಿರೋದ್ರಿಂದ ಯಾವುದೇ ಈ ಊರಿಗೆ ಬರುವುದಿಲ್ಲ. ಮಕ್ಕಳು, ಆಸ್ಪತ್ರೆಗೆ ಹೋಗುವ ವೃದ್ಧರು, ಕೆಲಸಕ್ಕೆ ಹೋಗುವ ಕಾರ್ಮಿಕರು ನಿತ್ಯ 3-4 ಕಿ.ಮೀ. ನಡೆದೇ ಬರಬೇಕು.
ಅಧಿಕಾರಿಗಳು ಹಾಗೂ ಜನಸಾಮಾನ್ಯರಿಗೆ ಹತ್ತಾರು ಬಾರಿ ಮನವಿ ಮಾಡಿದ್ದರೂ ನೋ ಯೂಸ್. ಅಷ್ಟೆ ಅಲ್ಲದೆ, 2019ರ ಮಳೆಗಾಲದ ಬಳಿಕ ಇಲ್ಲಿನ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆಯಾಗಿತ್ತು. ಆದರೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಈ ಊರಿಗೆ ಬಂದ ಹಣವನ್ನ ಬೇರೆ ಊರುಗಳಲ್ಲಿ ಬೇರೆ ಕೆಲಸ ಮಾಡಿಸಿದ ಪರಿಣಾಮ ಏಳು ವರ್ಷದಿಂದ ಈ ಊರಿನ ರಸ್ತೆಗಳು ಅಭಿವೃದ್ಧಿಯನ್ನೇ ಕಂಡಿಲ್ಲ.
2019ರ ಮಳೆಗಾಲದಲ್ಲಿ ಗುಂಡಿ ಬಿದ್ದ ರಸ್ತೆಗಳು ಇಂದಿಗೂ ಜೀವಂತವಾಗಿದೆ. ಈಗೀಗ, ಎಲ್ಲೆಂದರಲ್ಲಿ ಕುಸಿಯುತ್ತಿದ್ದ ಕುಸಿಯುತ್ತಿದ್ದು ಹಳ್ಳಿಗರು ಆತಂಕಕ್ಕೀಡಾಗಿದ್ದಾರೆ. ಸರ್ಕಾರ ಈಗಾದರೂ ಹಳ್ಳಿಗರಿಗೆ ಅನುಕೂಲವಾಗೋ ನಿಟ್ಟಿನಲ್ಲಿ ರಸ್ತೆ ದುರಸ್ಥಿ ಮಾಡಿಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
