Friday, August 14, 2026
Homeಜಿಲ್ಲಾಸುದ್ದಿ"ಕನ್ನಡ ಸೇನೆ" ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ರಾಜೇಗೌಡರ ನೇತೃತ್ವದಲ್ಲಿ PSI ಡಾ ಕೀರ್ತಿ ಕುಮಾರ್ ಗೆ ಸನ್ಮಾನ!

“ಕನ್ನಡ ಸೇನೆ” ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ರಾಜೇಗೌಡರ ನೇತೃತ್ವದಲ್ಲಿ PSI ಡಾ ಕೀರ್ತಿ ಕುಮಾರ್ ಗೆ ಸನ್ಮಾನ!

Telegram Group
Join Now

“ಕನ್ನಡ ಸೇನೆ” ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ರಾಜೇಗೌಡರ ನೇತೃದಲ್ಲಿ, ಕಾರ್ಯದರ್ಶಿಗಳು ಕಳವಾಸಿ ರವಿ, ಆಲ್ದೂರಿನ ಲಕ್ಷ್ಮಣ್, ಆಲ್ದೂರಿನ ಮಹೇಂದ್ರ, ಕನ್ನಡ ಸೇನೆಯ ಹಲವಾರು ಮಹಿಳಾ ಸದಸ್ಯರು ಮತ್ತು ಕಾರ್ಯಕರ್ತರೊಂದಿಗೆ ಬಸವನಹಳ್ಳಿ ಪೊಲೀಸ್ ಠಾಣೆಯ ಮುಂಭಾಗ, ಡಾಕ್ಟರ್ ಕೀರ್ತಿ ಕುಮಾರ್ ಎಚ್.ಡಿ. ಅವರಿಗೆ ಅದ್ದೂರಿಯಾಗಿ ಸನ್ಮಾನಿಸಲಾಯಿತು.

ಡಾ ಕೀರ್ತಿ ಕುಮಾರ್ ಹೆಚ್.ಡಿ.ಸಬ್ ಇನ್ಸ್ಪೆಕ್ಟರ್ ಆಪ್ ಪೊಲೀಸ್ ಬಸವನಹಳ್ಳಿ ಪೊಲೀಸ್ ಠಾಣೆ ಚಿಕ್ಕಮಗಳೂರು, ಇವರು ಮೂಲತಃ ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲೂಕು, ಗೋಣಿಬೀಡು ಹೋಬಳಿ, ಹೆಗ್ಗರವಳ್ಳಿ ಗ್ರಾಮದಲ್ಲಿ ಜನಿಸಿ, ಭಾರತೀಯ ಸೇನೆಯಲ್ಲಿ ಸುಮಾರು 17 ವರ್ಷಗಳ ಸೇವೆ, ವಿದೇಶದ ಶಾಂತಿ ಪಾಲನಾಪಡೆಯಲ್ಲಿ, ಕಾಂಗೋ, ಲೆಬನಾನ್, ನೈಜೀರಿಯಾ, ಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿ ನಮ್ಮ ನೆರೆಯ ದೇಶಗಳಾದ ಭೂತಾನ್ ಬಾಂಗ್ಲಾ ಬರ್ಮಾ ಶ್ರೀಲಂಕಾಗಳಲ್ಲಿ, ಗುರುತರ ಸೇವೆಯನ್ನು ಸಲ್ಲಿಸಿರುವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಎಂಟು ವರ್ಷಗಳ ಸೇವೆ, 1999ರ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಇವರು, ಇವರ ಸಾಮಾಜಿಕ ಕಾರ್ಯಗಳು, ಪರಿಸರ ಕಾಳಜಿ, ಅನಾಥಾಶ್ರಮ ಮತ್ತು ವೃದ್ರಾಶ್ರಮಗಳಿಗೆ ಸಹಾಯ, ಸೈನ್ಯದಲ್ಲಿ ಗುರುತರವಾದ ಸೇವೆ ಮುಂತಾದುಗಳನ್ನು ಪರಿಗಣಿಸಿ ತಮಿಳುನಾಡು ವಿಶ್ವವಿದ್ಯಾನಿಲಯ, ಗುರುತಿಸಿ ಗೌರವಿಸಿರುವ “ಗೌರವ ಡಾಕ್ಟರೇಟ್”ನೀಡಿ ಗೌರವಿಸಿದೆ.

2013ರಲ್ಲಿ ಸೇನೆಯಿಂದ ಬಂದ ನಂತರ, ಕೃಷಿ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿ, ಕಾರ್ಪೊರೇಟ್ ಕಂಪನಿಗಳಾದ ಇನ್ಫೋಸಿಸ್ ಮತ್ತು ವಿಪ್ರೋಗಳಲ್ಲಿ, ಉತ್ತಮ ಸೇವೆ ಸಲ್ಲಿಸಿ, ತದನಂತರ ದಾರವಾಡಕ್ಕೆ ತೆರಳಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಅನೇಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುತ್ತಾರೆ, 2016ರ ಬ್ಯಾಚ್ ಪೊಲೀಸ್ ಉಪನಿರೀಕ್ಷಕ ನಾಗಿ , ಕಾನೂನು ಸುವ್ಯವಸ್ಥೆ ಮತ್ತು ಕಳ್ಳತನ ಅಪರಾಧ ಪತ್ತೆ ಕಾರ್ಯದಲ್ಲಿ ತೊಡಗಿ, ದಕ್ಷ ರೀತಿಯಿಂದ ಸೇವೆ ಸಲ್ಲಿಸುತ್ತಿರುವರು,ಜನರ ಸೇವೆ ನಿಮ್ಮ ಸಮಾಜಮುಖಿ ಕೆಲಸಗಳು ಮತ್ತಷ್ಟು ಹೆಚ್ಚು ಮಾಡುವಂತಾಗಲಿ ಎಂದು ಆಶಿಸೋಣ,

ಭಾರತ ದೇಶದ 80ನೇ ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ, ಡಾ ಕೀರ್ತಿ ಕುಮಾರ್ ಎಚ್ ಡಿ, ರವರಿಗೆ ಶುಭಾಶಯಗಳು ಕೋರುತ್ತಾ, ದೇಶಕ್ಕೆ ಸೈನಿಕ ಮತ್ತು ಪೊಲೀಸರ ರಕ್ಷಣೆ ಜವಾಬ್ದಾರಿಗಳು, ಅಪಾರ ಎಂದು ನೆನಪಿಸಿಕೊಳ್ಳುತ್ತಾ, ಅವರ ದಕ್ಷ ರೀತಿಯ ಜನರ ಸೇವೆ ಮತ್ತಷ್ಟು ಹೆಚ್ಚಲಿ, ಇನ್ನಷ್ಟು ಪ್ರಶಸ್ತಿ ಪುರಸ್ಕಾರಗಳು ಸಿಗಲಿ, ನಮ್ಮ ಜಿಲ್ಲೆಗೆ ಮತ್ತಷ್ಟು ಹೆಮ್ಮೆ ತರಲಿ ಎಂದು ಕನ್ನಡ ಸೇನೆ ಅಧ್ಯಕ್ಷರು ಮತ್ತು ಸದಸ್ಯರು ಕಾರ್ಯಕರ್ತರು ಹಾರೈಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments