ಚಿಕ್ಕಮಗಳೂರು: ಜಿಲ್ಲೆಯ ಹದಗೆಟ್ಟ ರಸ್ತೆಗಳು ಮತ್ತು ರಸ್ತೆಗಳಲ್ಲಿನ ಗುಂಡಿಗಳ ವಿರುದ್ಧ ಬಿಜೆಪಿ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಬೀದಿಗಿಳಿದು ಆಲ್ದೂರು ಟು ಚಿಕ್ಕಮಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಹೌದು .. ರಸ್ತೆಯಲ್ಲಿನ ಗುಂಡಿಗಳ ವಿರುದ್ಧ ಬೀದಿಗಿಳಿದ ಬಿಜೆಪಿ ಆಲ್ದೂರು ಟು ಚಿಕ್ಕಮಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದು ರಸ್ತೆಯಲ್ಲಿನ ಗುಂಡಿಗೆ ಬಾಳೆಗಿಡ ನೆಟ್ಟು ಪಾದಯಾತ್ರೆಗೆ ಚಾಲನೆ ನೀಡಿದರು.
ರಸ್ತೆ ದುರಸ್ಥಿ ಮಾಡುವಂತೆ 18 ಕಿ.ಮೀ. ಪಾದಯಾತ್ರೆ ಕೈಗೊಂಡಿರುವ ಬಿಜೆಪಿ ಚಿಕ್ಕಮಗಳೂರು-ಆಲ್ದೂರು-ಬಾಳೆಹೊನ್ನೂರು-ಶೃಂಗೇರಿ ಮಾರ್ಗದಲ್ಲಿ ಭಾರಿ ಪ್ರಮಾಣದ ಗುಂಡಿಗಳಿದ್ದು ಶೃಂಗೇರಿ ಶಾಸಕ ರಾಜೇಗೌಡ, ಮೂಡಿಗೆರೆ ಶಾಸಕಿ ನಯನ ಮೋಟಮ್ಮ ವಿರುದ್ಧ ಕಿಡಿಕಾರಿದರು.
ರಾಜೇಗೌಡ-ನಯನಾ ಮೋಟಮ್ಮಗೆ ಗುಂಡಿಗಳ ಸರದಾರರು ಎಂದು ವ್ಯಂಗ್ಯವಾಡಿದ್ದು 18 ಕಿ.ಮೀ. ಪಾದಯಾತ್ರೆ ನಡೆಸಿ ಆಜಾದ್ ಪಾರ್ಕ್ ನಲ್ಲಿ ಕೊನೆಗೊಳಿಸಲಿರುವ ಬಿಜೆಪಿ ಕಾರ್ಯಕರ್ತರು ಮಳೆಗಾಲದಲ್ಲಿ ಬೇಸಿಗೆ ಬರಲಿ ಅಂತಾರೆ, ಬೇಸಿಗೆಯಲ್ಲಿ ಕೆಲಸ ಮಾಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಮೂಲಸೌಕರ್ಯ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಮತ್ತು ರಸ್ತೆಗಳ ದುರಸ್ತಿಗೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
