ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಮುಂಬರುವ ಹುಟ್ಟುಹಬ್ಬದ ಆಚರಣೆಯ ಕುರಿತು ಅಭಿಮಾನಿಗಳನ್ನುದ್ದೇಶಿಸಿ ನಾಲ್ಕು ಪುಟಗಳ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.
ಬಲವಾದ ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ಈ ವರ್ಷ ಸೆಪ್ಟೆಂಬರ್ 2 ರಂದು ಅಭಿಮಾನಿಗಳ ಜೊತೆ ಜನ್ಮದಿನ ಆಚರಿಸಿಕೊಳ್ಳದಿರಲು ಅವರು ತೀರ್ಮಾನಿಸಿದ್ದು, ಆ ದಿನದಂದು ತಾವು ಮನೆಯಲ್ಲಿ ಲಭ್ಯವಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸತ್ಕಾರಗಳು ಗದ್ದಲವಾಗಬಾರದು ಎಂಬ ಸಂಸ್ಕಾರಯುತ ಸಂದೇಶ ನೀಡಿರುವ ಕಿಚ್ಚ, ಯಾರೂ ಮನೆಯ ಬಳಿ ಬಂದು ಕಾಯುವುದು ಬೇಡ ಎಂದು ಕೈಮುಗಿದು ಮನವಿ ಮಾಡಿದ್ದಾರೆ.
ಸೆಪ್ಟೆಂಬರ್ 2 ಕೇವಲ ಒಂದು ಸಾಮಾನ್ಯ ದಿನಾಂಕವಷ್ಟೇ. ಆದರೆ ಕಳೆದ 30 ವರ್ಷಗಳಿಂದ ಆ ದಿನವನ್ನು ಅದ್ಧೂರಿ ಹಬ್ಬವನ್ನಾಗಿ ಪರಿವರ್ತಿಸಿದವರು ನೀವೇ. ನೀವು ನಿಮ್ಮ ಊರುಗಳಲ್ಲಿ ಮಾಡುವ ಸಮಾಜಮುಖಿ ಕಾರ್ಯಗಳೇ ನನಗೆ ಶ್ರೀರಕ್ಷೆ ಹಾಗೂ ನಿಜವಾದ ಆಶೀರ್ವಾದ” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
