Tuesday, September 8, 2026
Homeಜಿಲ್ಲಾಸುದ್ದಿಕಸ್ತೂರಿ ರಂಗನ್ ವರದಿ ತಿರಸ್ಕಾರದ ಮೂಲಕ ಸರ್ಕಾರ ಪಶ್ಚಿಮ ಘಟ್ಟದ ಅಂಚಿನಲ್ಲಿರುವ ಜನರ ಸಹಾಯಕ್ಕೆ ಬರಬೇಕು...

ಕಸ್ತೂರಿ ರಂಗನ್ ವರದಿ ತಿರಸ್ಕಾರದ ಮೂಲಕ ಸರ್ಕಾರ ಪಶ್ಚಿಮ ಘಟ್ಟದ ಅಂಚಿನಲ್ಲಿರುವ ಜನರ ಸಹಾಯಕ್ಕೆ ಬರಬೇಕು : ಎಂಕೆ ಪ್ರಾಣೇಶ್

Telegram Group
Join Now

ಮೂಡಿಗೆರೆ: ಕಸ್ತೂರಿ ರಂಗನ್ ವರದಿ ತಿರಸ್ಕಾರದ ಮೂಲಕ ಸರ್ಕಾರ ಪಶ್ಚಿಮ ಘಟ್ಟದ ಅಸುಪಾಸಿನಲ್ಲಿ ವಾಸವಿರುವ ಜನರ ಸಹಾಯಕ್ಕೆ ಬರಬೇಕು ಎಂದು ವಿಧಾನ ಪರಿಚತ್ ಮಾಜಿ ಸಭಾಪತಿ ಎಂ.ಕೆ ಪ್ರಾಣೇಶ್ ತಿಳಿಸಿದರು.

ಕಸ್ತೂರಿ ರಂಗನ್ ವರದಿ ಜಾರಿ ವಿರೋದಿಸಿ. ಬಾಳೂರಿನಲ್ಲಿ ನಡೆದ ಮೌನ ಪ್ರತಿಭಟನಾ ಮೆರವಣಿಗೆ ನಂತರ ನಡೆದ ಸಭೆ ಉದ್ದೇಶಿಸಿ ಮಾತನಾಡಿ. ನಮಗೆ ಸಂಕಷ್ಟ ಬಂದಾಗ ಹೋರಾಟವೆ ದಾರಿಯಾಗಿದ್ದು ನಮ್ಮಲ್ಲಿ ಒಡಕು ಇಲ್ಲದೆ ಹೋರಾಟ ಮಾಡಬೇಕಾಗಿದೆ. ನಮ್ಮ ಹಳ್ಳಿ ಗ್ರಾಮಕ್ಕೆ ಇಲ್ಲ ಎಂಬ ಬಾವನೆ ಕೆಲವರಲ್ಲಿ ಇರುತ್ತೆ. ಮುಂದೆ ಇದು ಎಲ್ಲಡೆ ವ್ಯಾಪಕವಾಗಿ ಹರಡುತ್ತದೆ. ಮರ ಇರುವಡೆ ಎಲ್ಲಾ ಅನ್ವಯಕ್ಕೆ ಬರಬಹುದು. ಇಂದೆ ಎಚ್ಚೇಳದಿದ್ದರೆ ಸಮಸ್ಯೆ ಖಚಿತ ಮಲೆನಾಡಿಗರ ಮೇಲೆ ಅನೇಕ ಅವರ ಪರಿಸರದ ಮೇಲೆ ಅನೇಕ ಸರ್ವೆ ಸಂಶೋದನೆ ನಡೆಯುತ್ತಿದ್ದು ನಮ್ಮ ಬದುಕು ಶಾಶ್ವತವಲ್ಲ ಎಂಬ ಭಾವನೆ ಬರುತ್ತಿದೆ. ಎಲ್ಲೋ ಕಚೇರಿಯಲ್ಲಿ ಕುಳಿತ ಅಧಿಕಾರಿಗಳು ನಿರ್ದರಿಸುವ ಕಾಲ ಹೋಗಿ ವ್ಯೆಜ್ಞಾನಿಕ ವರದಿ ಮೂಲಕ ಇಲ್ಲಿ ಜನರ ಬದುಕು ಸರ್ಕಾರ ಕಟ್ಟಿಕೊಡಬೇಕು ಎಂದರು.

ಭಾರತ ಕಾಪಿ ಮಂಡಲಿ ಅದ್ಯಕ್ಷ ದಿನೇಶ್ ಮಾತನಾಡಿ. ಕಾಪಿ ಮಂಡಳಿಯಂತ ಚಿಕ್ಕ ಸಂಸ್ಥೆ ಕಾಪಿಬೆಳೆ ಪ್ರದೇಶದಲ್ಲಿ ಪ್ರತಿ ಬೆಳೆಗಾರನ ತೋಟದಲ್ಲಿ ಇಂದು ಎಷ್ಟು ಮರ. ಹಸಿರು ಇದೆ ಮತ್ತು ಮುಂದಿನ 5ವರ್ಷದಲ್ಲಿ ನೋಡಿದರೆ ಎಷ್ಟು ಹಸಿರಿದೆ ಎಂಬ ತಂತ್ರಜ್ಞಾನ ತಂದಿರಬೇಕಾದರೆ ಇಂದಿನ ಸರ್ಕಾರ ಕಾಡು ಮತ್ತು ನಾಡನ್ನ ಬೇರೆ ಮಾಡಲು ಈಗೀನ ಅಧುನಿಕ ಯುಗದಲ್ಲಿ ಎಕೆ ಸಾದ್ಯವಿಲ್ಲ.ಎಂದ ಇವರು ತೋಟ ಮತ್ತು ಕಾಡನ್ನ ಕೂಡಲೆ ಬೆರ್ಪಡಿಸಿ ಕೆರಳ ಮಾದರಿಯಲ್ಲಿ ವರದಿ ಕ್ಯೆ ಬಿಡಬೇಕು ಎಂದು ಆಗ್ರಹಿಸಿದರು.

ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಪಶ್ಚಿಮ ಘಟ್ಟ ಪ್ರದೇಶವನ್ನು ಹಿಂದಿನಿಂದ ಕಾಪಾಡಿಕೊಂಡು ನಮಗೆ ಉಡುಗರೆಯಾಗಿ ನಮ್ಮ ಹಿರಿಯರು ನೀಡಿದ್ದು ಅದನ್ನು ಉಳಿಸಿಕೊಳ್ಳಲು ಪ್ರತಿಭಟನೆ ಮಾಡುವ ಪರಿಸ್ಥಿತಿ ಸರ್ಕಾರಗಳು ನಮ್ಮ ಮುಂದಿಟ್ಟಿದ್ದು ಬೇಸರದ ಸಂಗತಿ, ಬಡವರ ಹೊಟ್ಟೆ ಮೇಲೆ ಹೊಡೆಯುವ ಕಸ್ತೂರಿ ರಂಗನ್ ವರದಿಯನ್ನು ಕೈ ಬಿಡಬೇಕು. ಪರಿಸರ ಉಳಿಸಲು ಜಪಾನ್ ನಂತ ರಾಷ್ಟ್ರಗಳು ಭಾರತದಲ್ಲಿ ಕೋಟಿ ಹಣ ಹಾಕುತ್ತಿದ್ದೂ, NGO ಗಳು ಬಡವರ ಮೇಲೆ ಗದೆ ಪ್ರಹಾರ ಮಾಡುತ್ತಿದ್ದಾರೆ ಬದುಕಿನ ಹೋರಾಟಕ್ಕೆ ನಮ್ಮ ಹಕ್ಕು ಉಳಿಸಿಕೊಳ್ಳಲು ಪ್ರತಿಭಟನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ನಾವೆಲ್ಲ ಒಟ್ಟಾಗಿ ಒಗ್ಗಟ್ಟಿನಿಂದ ಹೋರಡಬೇಕು ಎಂದರು.

ಕಾರ್ಯಕ್ರಮದಲ್ಲಿ .ಭರತ್ ಬಾಳೂರು. ರೈತ ಮತ್ತು ಬೆಳೆಗಾರರ ಹಿತರಕ್ಷಣೆ ಅದ್ಯಕ್ಷ ವಿಜಯ್ ಕುಮಾರ್. ಲಕ್ಷಣಗೌಡ. ವಿಭಾ ಸುಶ್ಮಾ. ಶ್ರೀನಾಥ್. ಕಲ್ಲೇಶ್. ಮನೋಜ್.ದೀಪಕ್ ದೊಡ್ಡಯ್ಯ ಮಂಜುನಾಥ್ ಬಾಳೂರು. ಮತ್ತಿತರರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!