Sunday, September 13, 2026
Homeಜಿಲ್ಲಾಸುದ್ದಿLoud/Modified Silencer:‌ ಬೈಕ್ ಗಳಲ್ಲಿ ಕರ್ಕಶ ಶಬ್ಧ, ದಂಡ ವಿಧಿಸಿದ ಜಯಪುರ ಪೊಲೀಸ್!

Loud/Modified Silencer:‌ ಬೈಕ್ ಗಳಲ್ಲಿ ಕರ್ಕಶ ಶಬ್ಧ, ದಂಡ ವಿಧಿಸಿದ ಜಯಪುರ ಪೊಲೀಸ್!

Telegram Group
Join Now

ಜಯಪುರ:  ಬೈಕ್ ಗಳಲ್ಲಿ ಕರ್ಕಶ ಶಬ್ಧ (Loud/Modified Silencer) ಮಾಡಿದ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಸವಾರರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಜಯಪುರ ಪೊಲೀಸರು ಕಠಿಣ ಕ್ರಮ ಕೈಗೊಂಡು ದಂಡ ವಿಧಿಸಿದ್ದಾರೆ.

ಶನಿವಾರ ಸಂಜೆ ಜಯಪುರ ಪಟ್ಟಣದಲ್ಲಿ ಎರಡು ಬೈಕುಗಳನ್ನು ಹಿಡಿದು ದಂಡ ವಿಧಿಸಿ, ಕರ್ಕಶ ಶಬ್ಧದ ಸೈಲೆನ್ಸರ್ ನ್ನು ತೆರವುಗೊಳಿಸಲಾಗಿದೆ.

ಈ ಘಟನೆ ಕುರಿತು ಮಾಹಿತಿ ನೀಡಿದ ಜಯಪುರ ಠಾಣೆಯ ಪಿಎಸ್ಐ ರವೀಶ್
ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 52ರ ಪ್ರಕಾರ ಅಧಿಕೃತ ಅನುಮತಿಯಿಲ್ಲದೆ ಬೈಕ್ ಸೈಲೆನ್ಸರ್ ಬದಲಾಯಿಸುವುದು ಕಾನೂನುಬಾಹಿರವಾಗಿದ್ದು ಅಂತಹ ವಾಹನಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!