Monday, September 28, 2026
Homeಕರ್ನಾಟಕBank Strike: 3 ದಿನಗಳ ಕಾಲ ಕರೆ ನೀಡಿದ್ದ ಬ್ಯಾಂಕ್‌ ಮುಷ್ಕರ ಮುಂದೂಡಿಕೆ!

Bank Strike: 3 ದಿನಗಳ ಕಾಲ ಕರೆ ನೀಡಿದ್ದ ಬ್ಯಾಂಕ್‌ ಮುಷ್ಕರ ಮುಂದೂಡಿಕೆ!

Telegram Group
Join Now

ಇಂದಿನಿಂದ 3 ದಿನಗಳ ಕಾಲ ಕರೆ ನೀಡಿದ್ದ ಬ್ಯಾಂಕ್‌ ಮುಷ್ಕರವನ್ನು ಮುಂದೂಡಲಾಗಿದೆ ಎಂದು ಸ್ಟೇಟ್‌ ಬ್ಯಾಂಕ್‌ ಇಂಡಿಯಾ ಮಹತ್ವದ ಪ್ರಕಟಣೆ ಹೊರಡಿಸಿದೆ.

ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಕರೆ ನೀಡಿದ್ದ ಬ್ಯಾಂಕ್ ಮುಷ್ಕರವನ್ನು ಮುಂದೂಡಲಾಗಿದೆ. ಹೀಗಾಗಿಬ್ಯಾಂಕ್ ಸೇವೆಗಳಲ್ಲಿ ಯಾವುದೇ ವ್ಯತ್ಯಯ ಇಲ್ಲ. ಎಲ್ಲಾ ಶಾಖೆಗಳು ಮತ್ತು ಎಲ್ಲಾ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತವೆ. ಎಲ್ಲಾ SBI ಬ್ಯಾಂಕ್‌ಗಳು ಓಪನ್ ಇರುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 

ಸ್ಕೇಲ್ IV ಮತ್ತು ಅದಕ್ಕಿಂತ ಮೇಲಿನ ಅಧಿಕಾರಿಗಳ PLI (Performance Linked Incentive) ಯೋಜನೆ ಬದಲಾವಣೆ ಕುರಿತು IBA ಜೊತೆ ಮಾತುಕತೆ ಆರಂಭವಾಗಲಿದ್ದು, ಅವರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಜೊತೆಗೆ 2024ರ ಮಾರ್ಚ್ 8 ಸಭೆಯಲ್ಲಿ ತಿಳಿಸಿರುವಂತೆ ಇತ್ತೀಚಿನ ಬಾಕಿ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು. ಸದ್ಯ ಈ ಎಲ್ಲಾ ಒಪ್ಪಂದಗಳ ಕಾರಣದಿಂದಾಗಿ, UFBU ಕರೆ ನೀಡಿದ್ದ ಮೂರು ದಿನಗಳ ಬ್ಯಾಂಕ್‌ ಮುಷ್ಕರವನ್ನು ಹಿಂಪಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!