Wednesday, September 30, 2026
Homeಗ್ರೇಟರ್ ಬೆಂಗಳೂರುRising Stars of Karnataka: ಬೆಂಗಳೂರು: 'ರೈಸಿಂಗ್‌ ಸ್ಟಾರ್ಸ್‌ ಆಫ್‌ ಕರ್ನಾಟಕ ಬ್ಯೂಟಿ ಪೇಜೆಂಟ್‌ 2026ʼ...

Rising Stars of Karnataka: ಬೆಂಗಳೂರು: ‘ರೈಸಿಂಗ್‌ ಸ್ಟಾರ್ಸ್‌ ಆಫ್‌ ಕರ್ನಾಟಕ ಬ್ಯೂಟಿ ಪೇಜೆಂಟ್‌ 2026ʼ ಬೆಸ್ಟ್‌ ಸ್ಮೈಲ್‌ ಅವಾರ್ಡ್‌ ಬಾಳೆಹೊನ್ನೂರಿನ ಆವಿಶಿ ಗೌಡ

Telegram Group
Join Now

ಬೆಂಗಳೂರು: ಜೆಎಸ್‌ಆರ್‌ ಸ್ಟುಡಿಯೋಸ್‌ ವತಿಯಿಂದ ಸುದರ್ಶನ್‌ ಸಿಲ್ಕ್  ಸಹಯೋಗದಲ್ಲಿ ಬೆಂಗಳೂರಿನ‌ ಜಯನಗರದ ಯಡಿಯೂರು ಕೆರೆ ಸಮೀಪದ ಡಾ.ಪುನೀತ್‌ ರಾಜ್‌ ಕುಮಾರ್‌ ಆಡಿಟೋರಿಯಂನಲ್ಲಿ ಭಾನುವಾರ ಕಿಡ್ಸ್‌ ವಿಭಾಗದ ಫ್ಯಾಷನ್‌ ಶೋ ಸ್ಪರ್ಧೆಯ ʼರೈಸಿಂಗ್‌ ಸ್ಟಾರ್ಸ್‌ ಆಫ್‌ ಕರ್ನಾಟಕ ಬ್ಯೂಟಿ ಪೇಜೆಂಟ್‌ 2026ʼ ಗ್ರ್ಯಾಂಡ್‌ ಫಿನಾಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಆವಿಶಿ ಗೌಡ ಕೂಡ ಭಾಗವಹಿಸಿ ಬೆಸ್ಟ್‌ ಸ್ಮೈಲ್‌ ಅವಾರ್ಡ್‌ ಪಡೆದಿದ್ದಾರೆ.

ಇವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಮಾಗೋಡು ಗ್ರಾಮದವರಾಗಿದ್ದು  ಬೆಂಗಳೂರಿನಲ್ಲಿ ನೆಲೆಸಿರುತ್ತಾರೆ. ಒಂದನೇ ತರಗತಿಯಲ್ಲಿ ಓದುತ್ತಿರುವ ಕುಮಾರಿ ಆವಿಶಿಯವರು ಅಜಿತ್‌ ಕುಮಾರ್‌ ಎಂ.ಎಸ್‌ ಹಾಗೂ ಶಾಲಿನಿ ಗೌಡ ದಾರದಹಳ್ಳಿ ದಂಪತಿಯ ಪುತ್ರಿ.

ಫ್ಯಾಶನ್‌ ಶೋನಲ್ಲಿ ಬಗೆಬಗೆಯ ವಿನ್ಯಾಸದ ಧಿರಿಸು ತೊಟ್ಟು ಮಕ್ಕಳು ಆತ್ಮವಿಶ್ವಾಸದಿಂದ ಮಾರ್ಜಾಲದಂತೆ ಹೆಜ್ಜೆ ಹಾಕುತ್ತಿದ್ದರು. 30ಕ್ಕೂ ಹೆಚ್ಚು ಮಕ್ಕಳು  ವಿವಿಧ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಕನ್ನಡ ಚಿತ್ರರಂಗದ ನಟರಾದ ಅನುಪ್ರಭಾಕರ್‌ ಮುಖರ್ಜಿ, ನಟ ಮಾಸ್ಟರ್‌ ಮಂಜುನಾಥ್‌ ಮತ್ತು ಗ್ರ್ಯಾಂಡ್‌ ಫಿನಾಲೆಯ ಸೆಲಬ್ರೆಟಿ ಅತಿಥಿಯಾಗಿ ಭಾಗವಹಿಸಿದ್ದರು. ಗ್ರ್ಯಾಮಡ್‌ ಜ್ಯೂರಿಯಾಗಿ ಕವಿತಾ ಎಸ್(‌ ಮಿಸೆಸ್‌ ಇಂಡಿಯಾ 2025), ಫ್ಯಾಷನ್‌ ಡಿಸೇನರ್‌ , ಮಾಡೆಲ್‌ ರಾಜೇಶ್‌ ಶೆಟ್ಟಿ ಭಾಗವಹಿಸಿದ್ದರು. ಬಾಲನಟಿ ವಂಶಿಕಾ, ರಿಯಲಿಟಿ ಶೋ ಸ್ಪರ್ಧಿ ಯಶಸ್ವಿನಿ , ನಿರ್ದೇಶಕ ಹರ್ಷಿತ್‌ ಯಾದವ್‌, ಮಾಡೆಲ್‌ ಫ್ಯಾಷನ್‌ ಡಿಸೈನರ್‌ ಮಾಧುರ್ಯ, ನಿರ್ಮಾಪಕಿಮಮತಾ ರೆಡ್ಡಿ, ಮಾಡೆಲ್‌ ಗ್ರೂಮರ್‌ ನಂದನ್‌ ಗೌಡ ಹಾಗೂ ಅನುಷಾ ಉಪಸ್ಥಿತರಿದ್ದರು.

 

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!