Tuesday, September 29, 2026
Homeಕ್ರೈಮ್Hassan: ನಿಗೂಢವಾಗಿ ನಾಪತ್ತೆಯಾಗಿದ್ದ ನವ ವಿವಾಹಿತೆ ಪ್ರಿಯಾಂಕಾ 11 ದಿನದ ಬಳಿಕ ಶವವಾಗಿ ಪತ್ತೆ!

Hassan: ನಿಗೂಢವಾಗಿ ನಾಪತ್ತೆಯಾಗಿದ್ದ ನವ ವಿವಾಹಿತೆ ಪ್ರಿಯಾಂಕಾ 11 ದಿನದ ಬಳಿಕ ಶವವಾಗಿ ಪತ್ತೆ!

Telegram Group
Join Now

ಹಾಸನ: ನಿಗೂಢವಾಗಿ ನಾಪತ್ತೆಯಾಗಿದ್ದ ನವ ವಿವಾಹಿತೆ ಪ್ರಿಯಾಂಕಾ ಮೃತದೇಹ ಬರೋಬ್ಬರಿ ಹನ್ನೊಂದು ದಿನಗಳ ಬಳಿಕ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಕೋಲಾಳ ಗ್ರಾಮದ ಕೆರೆಯಲ್ಲಿ ಪತ್ತೆಯಾಗಿದೆ.

ಹೌದು .. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕುರುವಂಕ ಗ್ರಾಮದ ನವವಿವಾಹಿತೆ ಪ್ರಿಯಾಂಕಾ (24) ಕಣ್ಮರೆಯಾಗಿದ್ದಾರೆ. ಸೆ.19ರ ರಾತ್ರಿ ಸುಮಾರು 9 ಗಂಟೆಗೆ ಪ್ರಿಯಾಂಕಾ ಕಾಲುವೆಗೆ ಬಿದ್ದಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.

ಬಾಗೂರು ಗ್ರಾಮದ ಕೃಷ್ಣಸ್ವಾಮಿ-ಶೋಭ ದಂಪತಿ ಪುತ್ರಿಯಾಗಿದ್ದ ಈಕೆಯನ್ನು ಎಂಟು ತಿಂಗಳ ಹಿಂದೆ ಕುರುವಂಕ ಗ್ರಾಮದ ರಾಜಶೇಖರ ಜೊತೆ ವಿವಾಹಮಾಡಿ ಕೊಡಲಾಗಿತ್ತು. ಕೆಎಎಸ್‌ ಪರೀಕ್ಷೆಗಾಗಿ ಪ್ರಿಯಾಂಕಾ ಸಿದ್ಧತೆ ಕೂಡ ನಡೆಸುತ್ತಿದ್ದರು. ಪತ್ನಿ ಎರಡೂವರೆ ತಿಂಗಳ ಗರ್ಭಿಣಿ ಆಗಿದ್ದರೂ ವರದಕ್ಷಿಣೆಗಾಗಿ ಪತಿ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ರಾಜಿ ಸಂಧಾನವೂ ನಡೆದಿತ್ತು. ಈ ನಡುವೆ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದ ರಾಜಶೇಖರನೇ ಹೆಂಡತಿಯನ್ನು ಕೊಲೆ ಮಾಡಿದ್ದಾನೆ ಎಂದು ಪ್ರಿಯಾಂಕಾ ಪೋಷಕರು ದೂರಿದ್ದರು.

ಮತ್ತೊಂದೆಡೆ ಪ್ರಿಯಾಂಕಾ ಹಾಗೂ ಆಕೆಯ ಪೋಷಕರ ವಿರುದ್ಧವೇ ರಾಜಶೇಖರ ಮತ್ತು ಕುಟುಂಬಸ್ಥರು ದೂರಿದ್ದರು. ಆಕೆಗೆ ಈಗಾಗಲೇ ಮೊದಲೇ ಒಂದು ಮದುವೆಯಾಗಿತ್ತು ಎಂಬ ಕಹಿ ಸತ್ಯವನ್ನು ಮುಚ್ಚಿಟ್ಟು ಮದುವೆ ಮಾಡಿಕೊಡಲಾಗಿದೆ. ರಾಜಶೇಖರ ಜೊತೆ ಮದುವೆಯಾಗುತ್ತಿದ್ದ ದಿನವೇ ಆಕೆಯ ಹಳೆಯ ಗಂಡ ಪೋಲಿಸರ ಜೊತೆ ಕಲ್ಯಾಣ ಮಂಟಪಕ್ಕೇ ಬಂದಿದ್ದ. ಮಗಳು ಹಳೆಯ ಗಂಡನ ಜೊತೆ ಓಡಿ ಹೋಗುತ್ತಾಳೆ ಎಂಬ ಆತುರದಲ್ಲಿ ಆಕೆಯ ಪೋಷಕರು ವಿಚಾರ ಮುಚ್ಚಿಟ್ಟು ಮದುವೆ ಮಾಡಿದ್ದಾರೆ. ಮಗಳು ಮದುವೆಗೆ ಒಪ್ಪದಿದ್ದಾಗ ತಂದೆ-ತಾಯಿ ವಿಷದ ಬಾಟಲಿ ಹಿಡಿದು ಬೆದರಿಸಿ, ಒತ್ತಾಯಪೂರ್ವಕವಾಗಿ ರಾಜಶೇಖರ ಜೊತೆ ಮದುವೆಗೆ ಒಪ್ಪಿಸಿದ್ದರು ಎಂದು ಆರೋಪಿಸಿದ್ದರು.

ಆದರೆ ಅಂತಿಮವಾಗಿ ಈಗ ಶವವಾಗಿ ಪ್ರಿಯಾಂಕಾ ಪತ್ತೆಯಾಗಿದ್ದು, ಅಸಲಿಗೆ ನಡೆದಿದ್ದೇನು ಎಂಬುದು ಪೊಲೀಸರ ತನಿಖೆ ಬಳಿಕವೇ ಗೊತ್ತಾಗಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!