Thursday, October 1, 2026
Homeಕ್ರೈಮ್ಮಂಗಳೂರಿನ MRPLನಲ್ಲಿ ಭಾರಿ ಸ್ಫೋಟ: ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿ!

ಮಂಗಳೂರಿನ MRPLನಲ್ಲಿ ಭಾರಿ ಸ್ಫೋಟ: ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿ!

Telegram Group
Join Now

ಮಂಗಳೂರು:  ಜೋಕಟ್ಟೆ ಬಳಿ ಇರುವ ಎಂಆರ್‌ಪಿಎಲ್‌ನಲ್ಲಿ ಭಾರಿ ಸ್ಫೋಟದ ಶಬ್ದ ಕೇಳಿಬಂದಿದ್ದು, ದಟ್ಟ ಹೊಗೆ ಆವರಿಸಿದೆ ಬಳಿಕ ದೊಡ್ಡ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ.

ಮಂಗಳೂರು ರಿಫೈನರಿ & ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನ ಬಾಯ್ಲರ್ ಸ್ಫೋಟಗೊಂಡಿರುವ‌ ಸಾಧ್ಯತೆ ಇದೆ. ಅಕ್ಕಪಕ್ಕದ ಏರಿಯಾಗಳಿಗೆ ಹೊಗೆ ಆವರಿಸಿರುವುದು ಕಂಡುಬಂದಿದೆ.

ಈ ಘಟನೆಯಿಂದಾಗಿ ಮುಗಿಲೆತ್ತರಕ್ಕೆ ದಟ್ಟ ಹೊಗೆ ಆವರಿಸಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಜೋಕಟ್ಟೆಯಲ್ಲಿರುವ ಪಂಚಾಯತ್ ಕಟ್ಟಡ, ಅಂಗನವಾಡಿ ಕೇಂದ್ರ ಮತ್ತು ಗ್ರಂಥಾಲಯದ ಕಟ್ಟಡಗಳು ಕಂಪಿಸಿ, ಕಿಟಕಿ ಗಾಜುಗಳು ಪುಡಿಯಾಗಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!