Wednesday, September 30, 2026
Homeಕ್ರೈಮ್Sowjanya Case: ಎಸ್‌ಐಟಿ ತಂಡದಿಂದ ಹೆಸರು ಕೈಬಿಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಎಎಸ್‌ಪಿ

Sowjanya Case: ಎಸ್‌ಐಟಿ ತಂಡದಿಂದ ಹೆಸರು ಕೈಬಿಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಎಎಸ್‌ಪಿ

Telegram Group
Join Now

ಬೆಂಗಳೂರು: ಸೌಜನ್ಯ ಕೊಲೆ  ಪ್ರಕರಣದ ಮರುತನಿಖೆಗೂ ಮುನ್ನ ಹಿನ್ನಡೆಯಾಗಿದೆ. ಪ್ರಕರಣದ ತನಿಖೆಗೆ ರಚನೆಯಾದ ಎಸ್‌ಐಟಿ  ತಂಡದಿಂದ ನನ್ನ ಹೆಸರು ಕೈಬಿಡುವಂತೆ ಎಎಸ್‌ಪಿ ವೆಂಕಟೇಶ್ ಪ್ರಸನ್ನ ಪತ್ರ ಬರೆದಿದ್ದಾರೆ.

ಸೌಜನ್ಯ ಪ್ರಕರಣ ಮರುತನಿಖೆಗೆ ಎಸ್‌ಐಟಿ ನೇಮಕ ಮಾಡಲಾಗಿದೆ. ಎಸ್‌ಐಟಿ ತಂಡಕ್ಕೆ ಮತ್ತಷ್ಟು ಅಧಿಕಾರಿ, ಸಿಬ್ಬಂದಿ ನಿಯೋಜಿಸಲಾಗಿದೆ. ತನಿಖಾ ಸಹಾಯಕರಾಗಿ 16 ಮಂದಿ ನೇಮಕಗೊಂಡಿದ್ದಾರೆ. ಮಂಗಳೂರು ನಗರ ಸಿಸಿಬಿ ಎಸಿಪಿ ಮನೋಜ್ ಕುಮಾರ್ ನಾಯಕ್, ಬೆಂಗಳೂರು ಸಿಸಿಬಿ ಎಸಿಪಿ ರಾಮಚಂದ್ರ.ಬಿ, ಐಡಿ ಇನ್ಸ್ಪೆಕ್ಟರ್ ದೀಪಕ್, ಇನ್ಸ್ಪೆಕ್ಟರ್ ಮೋಹನ್ ಡಿ ಪಾಟೀಲ್, ಮಡಿವಾಳ ಸಂಚಾರ ಠಾಣೆಯ ಇನ್ಸ್ಪೆಕ್ಟರ್ ಈಶ್ವರಿ, ಕೋಣಾಜೆ ಠಾಣೆಯ ಪಿಎಸ್‌ಐ ಪುನೀತ್ ಗಾವಂಕರ್, ದಕ್ಷಿಣ ಸಂಚಾರಿ ಠಾಣೆಯ ಪಿಎಸ್‌ಐ ಪ್ರದೀಪ್, ಕಂಕನಾಡಿ ಠಾಣೆಯ ಪಿಎಸ್‌ಐ ಅನಿತಾ ನಿಕಂ ಸೇರಿದಂತೆ 16 ಸಿಬ್ಬಂದಿ ನೇಮಕವಾಗಿದೆ.

ಎಸ್‌ಐಟಿಯಲ್ಲಿರುವ ಎಎಸ್‌ಪಿ ವೆಂಕಟೇಶ್ ಪ್ರಸನ್ನ ಅವರು ತಮ್ಮನ್ನು ತಂಡದಿಂದ ಕೈಬಿಡುವಂತೆ ಎಸ್‌ಐಟಿ ಮುಖ್ಯಸ್ಥರಿಗೆ, ಡಿಜಿಪಿಗೆ ಪತ್ರ ಬರೆದಿದ್ದಾರೆ. ಈ ಹಿಂದೆ ನಾನು ಧರ್ಮಸ್ಥಳದಲ್ಲಿ ಕೆಲಸ ಮಾಡಿದ್ದೇನೆ. ಹೀಗಾಗಿ, ತನಿಖಾ ತಂಡದಿಂದ ನನ್ನ ಹೆಸರು ಕೈಬಿಡುವಂತೆ ಕೋರಿ ಪತ್ರ ಬರೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!