ಮೂಡಿಗೆರೆ: ಸತ್ಯ, ನ್ಯಾಯ ಹಾಗೂ ಜನಪರ ಕಾಳಜಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಧ್ವನಿ ಸಂಘದ ಮೂಡಿಗೆರೆ ತಾಲ್ಲೂಕು ಅಧ್ಯಕ್ಷರಾಗಿ ಹಳಸೆ ಗ್ರಾಮದ ಜಯಕುಮಾರ್ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳ ಆಯ್ಕೆ ಬಳಿಕ ಮಾತನಾಡಿದ ಜಯಕುಮಾರ್ ಹಳಸೆ ಅವರು 2013ರಲ್ಲಿ ಕೆಸವಳಲು ರಾಘವೇಂದ್ರ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಕರ್ನಾಟಕ ಧ್ವನಿ ಸಂಘವು ಹಲವು ಜನಪರ ಹೋರಾಟ ಹಾಗೂ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಸರ್ಕಾರದ ಗಮನಕ್ಕೆ ಸಾರ್ವಜನಿಕ ಸಮಸ್ಯೆಗಳನ್ನು ತಂದು ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸಂಘವು ಕಾರ್ಯನಿರ್ವಹಿಸಿದೆ ಎಂದು ತಿಳಿಸಿದರು.

ಪತ್ರಕರ್ತರಾದ ಹೊರಟ್ಟಿ ರಘು, ಬ್ರಿಜೇಶ್ ಕಡಿದಾಳ್, ಸಂಜಯ್, ನಯನ್ ತಳವಾರ, ಸಂದೀಪ್ ದಾರದಹಳ್ಳಿ, ಸುನಿಲ್ ಮಣ್ಣಿಕೆರೆ ಸೇರಿದಂತೆ ಹಲವರು ಸಂಘದ ಮೂಲಕ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ‘ಕರ್ನಾಟಕ ಧ್ವನಿ ಎಂದರೆ ಧೈರ್ಯ’ ಎಂಬ ಭಾವನೆ ಜನರಲ್ಲಿ ಮೂಡಿದೆ. ಹಿಂದಿನ ತಂಡದ ಕಾರ್ಯಗಳನ್ನು ಮುಂದುವರಿಸಿಕೊಂಡು ನೂತನ ತಂಡವೂ ಜನಪರವಾಗಿ ಕಾರ್ಯನಿರ್ವಹಿಸಲಿದೆ ಎಂದರು.
ಸಂಘಟನಾ ಕಾರ್ಯದರ್ಶಿಯಾಗಿ ಅಕ್ಷತ್ ಪಟ್ಟದ್ದೂರು, ಉಪಾಧ್ಯಕ್ಷರಾಗಿ ನೂತನ್ ಬೆಟ್ಟಗೆರೆ, ಪ್ರಧಾನ ಕಾರ್ಯದರ್ಶಿಯಾಗಿ ಪುನೀತ್ ಕಡಿದಾಳು , ನಗರ ಅಧ್ಯಕ್ಷರಾಗಿ ಮನೋಜ್ ಛತ್ರಮೈಧಾನ, ಖಜಾಂಚಿಯಾಗಿ ಸಾರ್ಥಕ್ ಮುತ್ತಿಗೆಪುರ, ಪಟ್ಟಣ ಅಧ್ಯಕ್ಷರಾಗಿ ಮನೋಜ್ ಹಾಗೂ ಕಾರ್ಯದರ್ಶಿಯಾಗಿ ಪುನೀತ್ ಕುಮಾರ್ ಆಯ್ಕೆಯಾಗಿದ್ದಾರೆ. ಗೋಣಿಬೀಡು ಹೋಬಳಿ ಅಧ್ಯಕ್ಷರಾಗಿ ಹಡ್ಲಗದ್ದೆಯ ಅಭಿಷೇಕ್ ಹಾಗೂ ಬಣಕಲ್ ಹೋಬಳಿ ಅಧ್ಯಕ್ಷರಾಗಿ ನವೀನ್ ಬೆಟ್ಟಗೆರೆ ಅವರನ್ನು ಆಯ್ಕೆ ಮಾಡಲಾಗಿದೆ.
ಸಂಘದ ನಿರ್ದೇಶಕರಾದ ಸುಂದ್ರೇಶ್ ಕೆಸವಳಲು, ಸಂಜಯ್ ಕಡಿದಾಳು, ಬ್ರಿಜೆಶ್ ಕಡಿದಾಳು,ಗಣೇಶ್ ಟಿ. ಏನ್,ಸಂಜಯ್ ಕೊಟ್ಟಿಗೆಹಾರ, ಹೊರಟ್ಟಿ ಸಂದೇಶ್, ಬಕ್ಕಿ ಪ್ರಸಾದ್, ಪ್ರಕಾಶ್, ಲಿಂಗೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
