ನಮ್ಮೆಲ್ಲರ ನಾಯಕರು ಶೃಂಗೇರಿ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವರು ಮಾಜಿ ಶಾಸಕರಾದ ಡಿ ಎನ್ ಜೀವರಾಜ್ ಹುಟ್ಟು ದಿನದ ಪ್ರಯುಕ್ತ ಖಾಂಡ್ಯ ಹೋಬಳಿ ಮತ್ತು ಬಾಳೆಹೊನ್ನೂರು ಹೋಬಳಿಯ ಕಾರ್ಯಕರ್ತರು ಒಟ್ಟಾಗಿ ಬಾಳೆಹೊನ್ನೂರಿನ ಶ್ರೀ ವಿದ್ಯಾ ಗಣಪತಿ ದೇವಸ್ಥಾನದಲ್ಲಿ DN ಜೀವರಾಜ್ ರವರ ಆರೋಗ್ಯ ಆಯಸ್ಸು ಸಾರ್ವಜನಿಕ ಸೇವೆಗೆ ಇನ್ನಷ್ಟು ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿ , ಸಂಕಲ್ಪ ಮಾಡಲಾಯಿತು ಎಂದು ಬಿಜೆಪಿ ಕಾರ್ಯಕರ್ತ ವಿನೋದ್ ಬೊಗಸೆ ತಿಳಿಸಿದ್ದಾರೆ.
2004 ರಿಂದ 2018 ರವರೆಗೆ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗದಷ್ಟು ಅಭಿವೃದ್ಧಿಯನ್ನು ಮಾಡಿ ಶೃಂಗೇರಿ ವಿಧಾನಸಭಾ ಕ್ಷೇತ್ರವನ್ನು ರಾಜ್ಯದ ಮಾದರಿ ಕ್ಷೇತ್ರವನ್ನು ಮಾಡಿದ ನೆನಪಿಗಾಗಿ, ಒಂದಿಷ್ಟು ನೆನಪು ಮಾಡಲು ಇಷ್ಟಪಡುತ್ತೇವೆ.
ರಸ್ತೆ ಕಾಮಗಾರಿಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ 70% ಕಾಂಕ್ರೆಟ್ ರಸ್ತೆ, ರೈತರಿಗಾಗಿ ಸಾಗುವಳಿ ಚೀಟಿಗಳ ವಿತರಣೆ, ಆಸ್ಪತ್ರೆಗಳ ಅಭಿವೃದ್ಧಿ ಮತ್ತು ನಿರ್ಮಾಣ, ಕಸ್ತೂರಿ ರಂಗನ್ ವರದಿಯ ವಿಚಾರವಾಗಿ ಸದನದಲ್ಲಿ ಮೊಟ್ಟಮೊದಲ ಬಾರಿಗೆ ಧ್ವನಿ ಎತ್ತಿದ ಏಕೈಕ ಶಾಸಕ ನಮ್ಮ ಡಿ ಎನ್ ಜೀವರಾಜ್ ರವರು ಹಾಗಾಗಿ ಅವರ ಅಭಿವೃದ್ಧಿ ಕಾರ್ಯಗಳನ್ನು ನೆನಪಿನಲ್ಲಿಟ್ಟುಕೊಂಡು ಸಾರ್ವಜನಿಕ ಸೇವೆ ಮಾಡಲು ಇನ್ನಷ್ಟು ಹೆಚ್ಚು ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಕಾರ್ಯಕರ್ತರ ಎಲ್ಲ ಸೇರಿ ಮಲೆನಾಡಿನ ಆಸರೆ ದೇವಿರಮ್ಮ ಟ್ರಸ್ಟ್ ವೃದ್ಧ ಮತ್ತು ಅಬಲಾಶ್ರಮಕ್ಕೆ ಭೇಟಿ ನೀಡಿ ಅನಾಥ ಮಕ್ಕಳಿಗೆ ಆಹಾರದ ಕಿಟ್ಟುಗಳನ್ನು ನೀಡಲಾಯಿತು.
ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರು , ಕರ್ನಾಟಕ ಸರ್ಕಾರದ ಮಾಜಿ ಸಚಿವರು , ಮಾಜಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಅನೇಕ ಜನಪರ ಹೋರಾಟದ ಹಾಗೂ ಅಭಿವೃದ್ಧಿ ಗಳ ಮೂಲಕ ವಿಶೇಷವಾಗಿ ಕ್ಷೇತ್ರದ ಸಂಪರ್ಕ ರಸ್ತೆಗಳು , ಬಡವಾಣೆಗಳ ರಸ್ತೆಗಳ ಕಾಂಕ್ರೀಟ್ಕರಣ , ಹೀಗೆ ಅನೇಕರ ಜನಪರ , ರೈತ ಪರ ಕಾರ್ಯಗಳ ಮುಖಾಂತರ ಶೃಂಗೇರಿ ಕ್ಷೇತ್ರದ ಅಭಿವೃದ್ಧಿಯ ಹರಿಕಾರರೆಂದೆ ಜನನುರಾಗಿರುವ ಡಿ ಎನ್ ಜೀವರಾಜ್ ರವರ ಜನ್ಮ ದಿನದ ಪ್ರಯುಕ್ತ ಬಾಳೆಹೊನ್ನೂರು ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು ಹಾಗೂ ದೇವಿರಮ್ಮ ಅನಾಥ ಆಶ್ರಮಕ್ಕೆ ಅಕ್ಕಿದಾನ ಮಾಡಲಾಯಿತು.
ಸಂದರ್ಭದಲ್ಲಿ ದಿಶಾಸಮಿತಿ ಸದಸ್ಯ ಮಣಿಕಂಠನ್ ಕಂದಸ್ವಾಮಿ , ಬಿಎಸ್ಎನ್ಎಲ್ ನಾಮನಿರ್ದೇಶಿತ ಸದಸ್ಯ ವಿನೋದ್ ಬೊಗಸೆ , ಮುಖಂಡರಾದ ವೆಂಕಟೇಶ್ , ಯುವಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಮಂಜು ಶೆಟ್ಟಿ , ಕಲ್ಲೇಶ್ , ಸುರೇಂದ್ರ , ಸಂತೋಷ್ , ಶಶಿದರ ಹಾಗೂ ಅನೇಕರು ಉಪಸ್ಥಿತರಿದ್ದರು .
