ಚಿಕ್ಕಮಗಳೂರು : ಕೆಡಿಪಿ ಸಭೆಯಲ್ಕಿ ಬರ ಘೋಷಣೆ ವಿಚಾರದ ಬಗ್ಗೆ ಕೈ-ಕಮಲ ನಾಯಕರ ವಾಕ್ಸಮರ ನಡೆದಿದೆ. ಇಂದು ಜಿಲ್ಲಾ ಪಂಚಾಯಿತಿಯಲ್ಲಿ ನಡೆಯುತ್ತಿರುವ ಕೆಡಿಪಿ ಸಭೆಯಲ್ಲಿ ಈ ಘಟನೆ ಕಾಣಬಹುದು.
ಹೌದು .. ಬರ ಘೋಷಣೆಯಲ್ಲಿ ಸರ್ಕಾರ ತಾರತಮ್ಯ ಎಸಗಿದೆ ಎಂದು ಜೆಡಿಎಸ್-ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರದ ಅವೈಜ್ಞಾನಿಕ ಮಾನದಂಡ, ಅನುದಾನ ವಿಳಂಬವೇ ಕಾರಣ ಎಂದು ಸಿಟ್ಟಿಗೆದ್ದರು.
ಹಾಗೆ ಶೃಂಗೇರಿ ಶಾಸಕ ರಾಜೇಗೌಡ-ಸಿ.ಟಿ.ರವಿ, ಭೋಜೇಗೌಡ ಮಧ್ಯೆ ಜಟಾಪಟಿ ನಡೆದಿದ್ದು ನಾಮಕಾವಸ್ತೆಗೆ ಬರ ಘೋಷಣೆ ಮಾಡಬೇಡಿ, ರೈತರಿಗೆ ಪರಿಹಾರ ಕೊಡಿ ಅತಿಥಿ ಉಪನ್ಯಾಸಕರಿಗೆ ಸಂಬಳ ನೀಡಿಲ್ಲ, 7 ತಿಂಗಳಿಂದ ವೃದ್ಧಾಪ್ಯ ವೇತನ ಬಂದಿಲ್ಲ, ರೈತರಿಗೆ ಪರಿಹಾರ ಕೊಡಿ ರೈತರೇ ಶಾಲು ಹೊದಿಸಿ ಪೇಟ ಹಾಕಿ ಸನ್ಮಾನ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ಉಭಯ ಪಕ್ಷಗಳ ನಾಯಕರ ವಾಕ್ ಸಮರದಿಂದ ಸಭೆಯಲ್ಲಿ ಗದ್ದಲದ ವಾತಾವರಣ ಉಂಟಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವ ಕೆಜೆ ಜಾರ್ಜ್ ಮಧ್ಯ ಪ್ರವೇಶದಿಂದ ತಿಳಿಗೊಳಿಸಿದರು.
