Wednesday, October 7, 2026
Homeಜಿಲ್ಲಾಸುದ್ದಿVishwanatha Gaddemane: ಅನ್ನದಾತರೊಂದಿಗೆ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಸದಾ ನಿಲ್ಲುತ್ತೆ: ವಿಶ್ವನಾಥ್ ಗದ್ದೆಮನೆ

Vishwanatha Gaddemane: ಅನ್ನದಾತರೊಂದಿಗೆ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಸದಾ ನಿಲ್ಲುತ್ತೆ: ವಿಶ್ವನಾಥ್ ಗದ್ದೆಮನೆ

Telegram Group
Join Now

ಶೃಂಗೇರಿ: ಮಲೆನಾಡಿನ ರೈತರು ಅಕ್ಷರಶಃ ಭಯ, ಆತಂಕದಲ್ಲೇ ದಿನವನ್ನ ದೂಡುವಂತಾಗಿದೆ.. ಸರಿಯಾಗಿ ತಲೆ ಎತ್ತಿ ಜೀವನ ಮಾಡದಂತಹ ಪರಿಸ್ಥಿತಿ ಮಲೆನಾಡಿನ ಜನರಿಗೆ ಬಂದೊದಾಗಿದೆ.. ಕಸ್ತೂರಿ ರಂಗನ್ ವರದಿ, ಪರಿಸರ ಸೂಕ್ಷ್ಮ ವಲಯ( ಇಎಸ್ ಝಡ್), ಅರಣ್ಯ ಹಕ್ಕು ಕಾಯ್ದೆ, ಬಗರ್ ಹುಕ್ಕುಂ ಜಮೀನು, ಡೀಮ್ಡ್ ಫಾರೆಸ್ಟ್-ಭೂಮಿ-ಅರಣ್ಯ ಸಮಸ್ಯೆ, ಆನೆ-ಹುಲಿ ಸಂರಕ್ಷಣಾ ಪ್ರದೇಶ, ಗಾಡ್ಗೀಲ್ ವರದಿ… ಹೀಗೆ ಸಾಲು ಸಾಲು ಯೋಜನೆಗಳು ರೈತರನ್ನ, ರೈತರ ಬದುಕನ್ನ ಹಿಂಡಿ ಹಿಪ್ಪೆ ಮಾಡಿ ಹಾಕುತ್ತಿದೆ. ರೈತರನ್ನ ಬೆಂಬಿಡದ ಭೂತದಂತೆ ಕಾಡುತ್ತಿರುವ ಈ ಸಮಸ್ಯೆಗಳಿಂದ ರೈತರಿಗೆ ಮುಕ್ತಿ ಬೇಕಾಗಿದೆ.. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರ ಪಾಲಿಗೆ ಸಂಜೀವಿನಿಯಂತೆ ನಿಂತು ಹೋರಾಟಕ್ಕೆ ಧುಮುಕಿದೆ ವಿಶ್ವನಾಥ್ ಗದ್ದೆಮನೆ ನೇತೃತ್ವದ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ.

ಯೆಸ್, ರೈತರ ಬದುಕು, ಭೂಮಿ ಹಾಗೂ ಅನ್ನದಾತರ ಹಕ್ಕುಗಳನ್ನ ರಕ್ಷಣೆ ಮಾಡಲು ಮಲೆನಾಡಿನಲ್ಲಿ ಹೋರಾಟದ ಕಹಳೆ ಮೊಳಗಿದೆ. ಒಂದು ಕಡೆ ಕಸ್ತೂರಿರಂಗನ್ ಯೋಜನೆ ಜಾರಿಯ ತೂಗುಕತ್ತಿಯಿಂದ ಆತಂಕದಲ್ಲಿರುವಾಗಲೇ ಹತ್ತು ಹಲವು ಸಮಸ್ಯೆಗಳಿಂದ ಅನ್ನದಾತ ನಲುಗುತ್ತಿದ್ದಾನೆ. ಸದ್ಯ ಹಕ್ಕುಪತ್ರವಿಲ್ಲದ ದಾಖಲೆಗಳನ್ನ ಅಮಾನ್ಯಗೊಳಿಸಲು ಸರ್ಕಾರ ಸುತ್ತೋಲೆ ಹೊರಡಿಸಿರೋದು, ರೈತರು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಅದೆಷ್ಟೋ ಜನರು ತಲೆ ತಲಾಂತರದಿಂದ ವಾಸ ಮಾಡುತ್ತಿದ್ರೂ ಸರಿಯಾದ ದಾಖಲೆಗಳನ್ನ ಮಾಡಿಸಿಕೊಂಡಿಲ್ಲ.. ಮಾಡಿಸಿಕೊಂಡಿಲ್ಲ ಅನ್ನೋಕ್ಕಿಂತಲೂ ಸಂಬAಧಪಟ್ಟವರು ಮಾಡಿಕೊಟ್ಟಿಲ್ಲ.. ಇದೀಗ ಸುತ್ತೋಲೆಯ ಬಾಣ ಬಿಟ್ಟಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.. ಹೀಗಾಗಿಯೇ ಸುತ್ತೋಲೆಯನ್ನ ಕೂಡಲೇ ಹಿಂಪಡೆಯಬೇಕು ಅಂತಾ ರೈತರು ಬೀದಿಗೆ ಇಳಿದಿದ್ದಾರೆ.. ರೈತರು ಎದೆಗುಂದಬೇಕಿಲ್ಲ, ಅನ್ನದಾತರೊಂದಿಗೆ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಸದಾ ನಿಲ್ಲುತ್ತೆ ಎಂದಿದ್ದಾರೆ ವಿಶ್ವನಾಥ್ ಗದ್ದೆಮನೆ

ಆದ್ರೆ ರೈತರ ಪರ ಹೋರಾಟ ಮಾಡಲು ಯಾವ ರಾಜಕೀಯ ನಾಯಕರು, ಮುಖಂಡರು ಮುಂದಾಗಿಲ್ಲ. ಈ ವೇಳೆ ರೈತರಿಗೆ ಜೊತೆಯಾಗಬೇಕು ಅಂತಾ ನಿಂತಿರೋದು ರೈತ ನಾಯಕ ವಿಶ್ವನಾಥ್ ಗದ್ದೆಮನೆ. ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ವತಿಯಿಂದ ಹೋರಾಟಕ್ಕೆ ಕರೆ ಕೊಟ್ಟಿರುವ ಹೋರಾಟಕ್ಕೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ.. ಸಾವಿರಾರು ಸಂಖ್ಯೆಯಲ್ಲಿ ಅನ್ನದಾತರು ಬೀದಿಗಿಳಿದು, ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ. ನಮ್ಮನ್ನ ಒಕ್ಕಲೆಬ್ಬಿಸುವ ನಿಮ್ಮ ನಿಧಾರಕ್ಕೆ ಧಿಕ್ಕಾರ.. ಶಾಸಕರೇ ಹಕ್ಕು ಪತ್ರ ಕೊಡಿ, ರೈತರ ಬದುಕು ಉಳಿಸಿ ಅಂತಾ ಮನವಿ ಮಾಡಿದ್ದಾರೆ.. ರೈತರ ಪರ ಹೋರಾಟಕ್ಕೆ ಧುಮುಕಿರುವ ವಿಶ್ಬನಾಥ್ ಗದ್ದೆಮನೆ ನೇತೃತ್ವದ ಒಕ್ಕೂಟದ ಹೋರಾಟಕ್ಕೆ ಶ್ರೀ ಕ್ಷೇತ್ರ ಸಿಂಹನಗದ್ದೆ ಬಸ್ತಿ ಮಠದ ಸ್ವಸ್ತಿ ಶ್ರೀ ಶ್ರೀ ಶ್ರೀ ಲಕ್ಷಿö್ಮ ಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಯವರು ಕೈ ಜೋಡಿಸಿದ್ದಾರೆ..

ಈ ವೇಳೆ ರೈತರಿಗೆ ಸರ್ಕಾರಗಳಿಂದ, ಇಲಾಖೆಗಳಿಂದ, ಅಧಿಕಾರಿಗಳಿಂದ ನಿರಂತರವಾಗಿ ಆಗುತ್ತಿರುವ ತೊಂದರೆಗಳ ಬಗ್ಗೆ ರೈತರು ಎಳೆ ಎಳೆಯಾಗಿ ಬಿಡಿಸಿ ಇಟ್ಟಿದ್ದಾರೆ.. ಸಮಸ್ಯೆಗೆ ಪರಿಹಾರ ಸಿಗೋವರೆಗೂ ಹೋರಾಟ ಕಯ ಬಿಡಲ್ಲ ಅಂತಿದ್ದಾರೆ ರೈತರು..

ಒಟ್ಟಿನಲ್ಲಿ, ಅರಣ್ಯ ಇಲಾಖೆಯ ದ್ವಂದ್ವ ನೀತಿಯಿಂದ ಮಲೆನಾಡಿಗರು, ಅಕ್ಷರಶಃ ನಲುಗಿ ಹೋಗಿದ್ದಾರೆ.! ವಿದ್ಯುತ್, ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನ ಪಡೆದುಕೊಳ್ಳಲು ದಯನೀಯವಾಗಿ ಬೇಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿರೋದು ನಿಜಕ್ಕೂ ದುರಂತವೇ ಸರಿ..

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!