Sunday, October 25, 2026
Homeಜಿಲ್ಲಾಸುದ್ದಿ'ಪ್ರೇಮದ ಊರಲಿ' ಶೂಟಿಂಗ್ ಸ್ಪಾಟ್‌ನಲ್ಲಿ ಭಾರೀ ಟ್ರಾಫಿಕ್ ಜಾಮ್: ಮಳೆ ಮಲ್ಲೇಶ್ವರ ದೇವಾಲಯಕ್ಕೆ ಭಕ್ತರ ದಂಡು!

‘ಪ್ರೇಮದ ಊರಲಿ’ ಶೂಟಿಂಗ್ ಸ್ಪಾಟ್‌ನಲ್ಲಿ ಭಾರೀ ಟ್ರಾಫಿಕ್ ಜಾಮ್: ಮಳೆ ಮಲ್ಲೇಶ್ವರ ದೇವಾಲಯಕ್ಕೆ ಭಕ್ತರ ದಂಡು!

Telegram Group
Join Now

ಹಾಸನ :‘ಪ್ರೇಮದ ಊರಲಿ’ ಸಿನಿಮಾ ಬಿಡುಗಡೆಯಾದ ನಂತರ ಹಾಸನದ ಸೀಗೆಗುಡ್ಡ ಮತ್ತು ಮಳೆ ಮಲ್ಲೇಶ್ವರ ದೇವಾಲಯಕ್ಕೆ ಭಕ್ತರು ಮತ್ತು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.

ಇತ್ತೀಚೆಗೆ ಸದ್ದು ಮಾಡಿದ ಕನ್ನಡದ ಬ್ಲಾಕ್‌ ಬಸ್ಟರ್  ‘ಪ್ರೇಮದ ಊರಲಿ’ ಚಿತ್ರದ ಪ್ರಮುಖ ದೃಶ್ಯಗಳು ಇಲ್ಲಿ ಚಿತ್ರೀಕರಣಗೊಂಡ ನಂತರ, ಈ ತಾಣ ರಾತ್ರೋರಾತ್ರಿ ಪ್ರವಾಸಿಗರ ನೆಚ್ಚಿನ ಹಾಟ್‌ಸ್ಪಾಟ್ ಆಗಿ ಮಾರ್ಪಟ್ಟಿದೆ ಎಂದರೆ ತಪ್ಪಾಗಲಾರದು.

ವಿಶೇಷವಾಗಿ ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ವಾಹನಗಳಲ್ಲಿ ಸೀಗೆಗುಡ್ಡಕ್ಕೆ ಲಗ್ಗೆ ಇಡುತ್ತಿದ್ದಾರೆ. ದೇವಸ್ಥಾನದ ರಸ್ತೆಗಳಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಕಿಲೋಮೀಟರ್‌ಗಟ್ಟಲೆ ಭಾರಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.

ಸೀಗೆಗುಡ್ಡಕ್ಕೆ ಬರುತ್ತಿರುವ ಯುವಜನತೆ ಮತ್ತು ಪ್ರವಾಸಿಗರು ದೇವರ ದರ್ಶನ ಪಡೆಯುವುದರ ಜೊತೆಗೆ, ಸಿನಿಮಾದಲ್ಲಿ ಕಾಣಿಸಿಕೊಂಡ ಮಲ್ಲೇಶ್ವರ ದೇವರ ವಿಗ್ರಹದ ಮುಂದೆ ನಿಂತು ಮುಗಿಬಿದ್ದು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಸಿನಿಮಾದ ಹಿಟ್ ಹಾಡುಗಳಿಗೆ ವಿಗ್ರಹ ಮತ್ತು ಬೆಟ್ಟದ ಹಿನ್ನೆಲೆಯಲ್ಲಿ ಇನ್‌ಸ್ಟಾಗ್ರಾಮ್ ರೀಲ್ಸ್‌ಗಳನ್ನು ಮಾಡುತ್ತಾ ಡ್ಯಾನ್ಸ್ ಮಾಡುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ಒಟ್ಟಿನಲ್ಲಿ, ‘ಪ್ರೇಮದ ಊರಲಿ’ ಚಿತ್ರವು ಹಾಸನದ ಈ ಪುಟ್ಟ ಗುಡ್ಡವನ್ನು ಕರ್ನಾಟಕದ ಹೊಸ ಟೂರಿಸ್ಟ್ ಸ್ಪಾಟ್ ಆಗಿ ಪರಿವರ್ತಿಸಿದೆ!

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!