ಹಾಸನ : ಟೈಯರ್ ಬ್ಲಾಸ್ಟ್ ಆಗಿ ರಸ್ತೆಗೆ ಪಲ್ಟಿಯಾದ ಸಿಮೆಂಟ್ ತುಂಬಿದ ಲಾರಿ ಜಾರ್ಖಂಡ್ ಮೂಲದ ಚಾಲಕ ರಾಜೇಶ್ ಯಾದವ್ (30) ಸ್ಥಿತಿ ಗಂಭೀರವಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಗುಳಗಳಲೆ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಡೆದಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಸಿಮೆಂಟ್ ತುಂಬಿಕೊಂಡು ತೆರಳುತ್ತಿದ್ದ ಲಾರಿ ಈ ವೇಳೆ ಚಲಿಸುತ್ತಿದ್ದ ವೇಳೆ ಬ್ಲಾಸ್ಟ್ ಆದ ಟೈಯರ್ ಆಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಪಲ್ಟಿಯಾಗಿ ನೂರು ಮೀಟರ್ ಜಾರಿ ಹೋದ ಲಾರಿ ರಸ್ತೆಯಲ್ಲೆಲ್ಲಾ ಚೆಲ್ಲಾಡಿರುವ ಸಿಮೆಂಟ್ ಚೀಲಗಳು ಇದರಿಂದಾಗಿ ನಿಧಾನವಾಗಿ ಚಲಿಸುತ್ತಿರುವ ಉಳಿದ ವಾಹನಗಳು.
ಗುಳಗಳಲೆ ಸಮೀಪ ಪದೇ ಪದೇ ಸಂಭವಿಸುತ್ತಿರುವ ಅಪಘಾತಗಳು ಬ್ಲಾಕ್ ಸ್ಪಾಟ್ ಎಂದು ಗುರುತಿಸಿರುವ ಪೊಲೀಸ್ ಇಲಾಖೆ ಆದರೂ ಯಾವುದೇ ಕ್ರಮ ಕೈಗೊಳ್ಳದ ಎನ್ಎಚ್ ಅಧಿಕಾರಿಗಳು ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ವಾಹನ ಸವಾರರು ಹಾಗೂ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
