Thursday, October 29, 2026
Homeಜಿಲ್ಲಾಸುದ್ದಿHasanamba Utsava : ಇಂದಿನಿಂದ ಹಾಸನಾಂಬೆ ಜಾತ್ರೆ ಆರಂಭ: ಎಷ್ಟು ಗಂಟೆಗೆ ಯಾರಿಗೆಲ್ಲಾ ಅವಕಾಶ? ಇಲ್ಲಿದೆ...

Hasanamba Utsava : ಇಂದಿನಿಂದ ಹಾಸನಾಂಬೆ ಜಾತ್ರೆ ಆರಂಭ: ಎಷ್ಟು ಗಂಟೆಗೆ ಯಾರಿಗೆಲ್ಲಾ ಅವಕಾಶ? ಇಲ್ಲಿದೆ ಫುಲ್‌ ಡಿಟೇಲ್ಸ್!

Telegram Group
Join Now

ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನದ ಅಧಿದೇವತೆ ಶ್ರೀ ಹಾಸನಾಂಬೆ ದೇವಸ್ಥಾನದ ಗರ್ಭಗುಡಿಯ ಬಾಗಿಲು ಇಂದು ಮಧ್ಯಾಹ್ನ 12 ಗಂಟೆಗೆ ಶಾಸ್ತ್ರೋಕ್ತವಾಗಿ ತೆರೆಯಲಿದೆ.ಇಂದು (ಅ.29) ಆಶ್ವೀಜ ಕೃಷ್ಣ ಪಕ್ಷದ ಚತುರ್ಥಿ ಹಾಗೂ ರೋಹಿಣಿ ನಕ್ಷತ್ರದ ಶುಭ ಮುಹೂರ್ತದಲ್ಲಿ ಗರ್ಭಗುಡಿಯ ಬಾಗಿಲನ್ನು ಓಪನ್ ಮಾಡಲಾಗುತ್ತಿದ್ದು, ನವೆಂಬರ್ 11ರವರೆಗೆ ಒಟ್ಟು 14 ದಿನಗಳ ಕಾಲ ಹಾಸನಾಂಬೆ ಜಾತ್ರಾ ಮಹೋತ್ಸವ ಜರುಗಲಿದೆ.

ಇಂದಿನಿಂದ ನ.11 ರವರೆಗೆ ಹಾಸನಾಂಬ ಹಾಗೂ ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ನೆಡೆಯಲಿದೆ. ಜಾತ್ರೆಯ ಪ್ರಯುಕ್ತ ಗುರುವಾರ ಮಧ್ಯಾಹ್ನ ಅರಸು ವಂಶಸ್ಥ ನಂಜರಾಜೇಅರಸ್ ಗೊನೆಯುಳ್ಳ ಬಾಳೆ ಕಂಬ ಕಡಿದ ಬಳಿಕ ಗರ್ಭಗುಡಿ ಬಾಗಿಲು ತೆರೆಯಲಾಗುತ್ತದೆ. ಗರ್ಭಗುಡಿ ಬಾಗಿಲು ತೆರೆದ ವೇಳೆ ಕಳೆದ ವರ್ಷ ಹಚ್ಚಿದ ದೀಪ ಉರಿಯುತ್ತಿರುತ್ತದೆ. ಹೂ ಬಾಡಿರುವುದಿಲ್ಲ, ನೈವೇದ್ಯ ಹಳಸಿರುವುದಿಲ್ಲ.

ಸಾರ್ವಜನಿಕ ಧರ್ಮದರ್ಶನದ ಜೊತೆಗೆ ಭಕ್ತಾದಿಗಳ ಅನುಕೂಲಕ್ಕಾಗಿ 300 ರೂ. ಹಾಗೂ 1,000 ರೂ.ನ ಪ್ರತ್ಯೇಕ ಕ್ಯೂ ಲೈನ್ ಟಿಕೆಟ್‌ಗಳನ್ನು ಕಲ್ಪಿಸಲಾಗಿದೆ.

ಗೋಲ್ಡನ್ ಪಾಸ್: ಬೆಳಿಗ್ಗೆ 8:00 ರಿಂದ 10:00 ಗಂಟೆಯವರೆಗೆ ದರ್ಶನಕ್ಕೆ ಅವಕಾಶ (ಒಬ್ಬರಿಗೆ ಮಾತ್ರ ಅನುಮತಿ).

ವಿಐಪಿ ದರ್ಶನ: ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:30 ರವರೆಗೆ ಗಣ್ಯರಿಗೆ ಜಿಲ್ಲಾಡಳಿತದಿಂದಲೇ ದರ್ಶನ ವ್ಯವಸ್ಥೆ.

ಜಾತ್ರೆಯ ಮೊದಲ ದಿನ (ಇಂದು) ಮತ್ತು ಕೊನೆಯ ದಿನ ಯಾವುದೇ ಶಿಷ್ಟಾಚಾರ ಹಾಗೂ ಪಾಸ್‌ಗಳಿಗೆ ಅವಕಾಶವಿರುವುದಿಲ್ಲ.

ಹಾಸನಾಂಬ ಜಾತ್ರಾ ಮಹೋತ್ಸವದ ಅಂಗವಾಗಿ ನಗರಸಭೆ ವಸ್ತು ಪ್ರದರ್ಶನದ ಆವರಣದಲ್ಲಿ ಕುಸ್ತಿ, ವಾಲಿಬಾಲ್, ಕಬ್ಬಡಿ ಪಂದ್ಯಾವಳಿ, ರಂಗೋಲಿ ಸ್ಪರ್ಧೆ ಆಯೋಜನೆ ಮಾಡಿದೆ. ಹಳ್ಳಿಕಾರ್, ಅಮೃತ್‌ಮಹಲ್ ತಳಿಯ ಜಾನುವಾರುಗಳು, ಶ್ವಾನ, ಬೆಕ್ಕು, ಟಗರುಗಳ ಪ್ರದರ್ಶನ ಆಯೋಜನೆ ಮಾಡಲಾಗಿದೆ.

ಭದ್ರತೆಗಾಗಿ ಮೂರು ಪಾಳಿಯಲ್ಲಿ 2000ಕ್ಕೂ ಅಧಿಕ ಪೊಲೀಸರು ಹಾಗೂ ಹೋಮ್‌ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಅಲ್ಲದೇ ದೇವಾಲಯದ ಸುತ್ತ ಸಿಸಿಟಿವಿ ಅಳವಡಿಸಲಾಗಿದೆ. ಧರ್ಮ ದರ್ಶನದ ಸಾಲಿನಲ್ಲಿ ಯಾವುದೇ ನೂಕು-ನುಗ್ಗಲು ಉಂಟಾಗದಂತೆ ಕ್ರಮಕೈಗೊಳ್ಳಲಾಗಿದೆ. ಭಕ್ತರು ಮಳೆಯಿಂದ ನೆನೆಯದಂತೆ ಟೆಂಟ್ ನಿರ್ಮಾಣ ಮಾಡಲಾಗಿದೆ.

ಅ.30ರ ಬೆಳಗ್ಗೆ 6 ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, 1000, 300 ರೂ. ನ ವಿಶೇಷ ದರ್ಶನದ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!