Friday, November 6, 2026
Homeಜಿಲ್ಲಾಸುದ್ದಿElection boycott banner: ಕಾಫಿನಾಡಿನಲ್ಲಿ ಚುನಾವಣೆ ಬಹಿಷ್ಕಾರ ಬ್ಯಾನರ್: ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಿದ ಗ್ರಾಮಸ್ಥರು!

Election boycott banner: ಕಾಫಿನಾಡಿನಲ್ಲಿ ಚುನಾವಣೆ ಬಹಿಷ್ಕಾರ ಬ್ಯಾನರ್: ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಿದ ಗ್ರಾಮಸ್ಥರು!

Telegram Group
Join Now

ಕೊಪ್ಪ: ತಾಲೂಕಿನ ಮೇಗುಂದ ಹೋಬಳಿಯ ಅತ್ತಿಕೊಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸರೀಕಟ್ಟೆ ಸಮೀಪದ ಮೇರುತಿ ಬಡಾವಣೆಯ ಗ್ರಾಮಸ್ಥರು ಚುನಾವಣೆ ಬಹಿಷ್ಕಾರದ ಬ್ಯಾನರ್ ಹಾಕುವ ಮೂಲಕ ಆಳುವವರಿಗೆ ಬಿಸಿ ಮುಟ್ಟಿಸಿದ್ದಾರೆ.

“ರಸ್ತೆ ಮಾಡಿದ್ರೆ ಮಾತ್ರ ಮತ ಇಲ್ಲದಿದ್ದರೆ ನಮ್ಮೂರಿಗೆ ಯಾವ ರಾಜಕೀಯ ಪಕ್ಷಕ್ಕೂ ಪ್ರವೇಶವಿಲ್ಲ. ರಸ್ತೆ ಮಾಡಿದವರಿಗೆ ನಮ್ಮ ಮತ” ಎಂಬ ಅಕ್ಷರಗಳು ಇರುವ ಬ್ಯಾನರ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹತ್ತಾರು ವರ್ಷಗಳಿಂದ ರಸ್ತೆ ಸಮಸ್ಯೆ
ಮೇರುತಿ ಬಡಾವಣೆಯಲ್ಲಿ ಸುಮಾರು ಅರವತ್ತಕ್ಕೂ ಹೆಚ್ಚಿನ ಮನೆಗಳಿದ್ದು ಸರಿಯಾದ ರಸ್ತೆ ಇಲ್ಲದೆ ಜನ ಪರದಾಡುವ ಸ್ಥಿತಿ ಎದುರಾಗಿದೆ.ಮೇರುತಿ ಪರ್ವತದ ತಪ್ಪಲಿನಲ್ಲಿರುವ ಈ ಗ್ರಾಮದಲ್ಲಿ ಮಳೆಗಾಲದಲ್ಲೆಲ್ಲ ನೀರು ರಸ್ತೆಯಲ್ಲೆ ಹರಿದು ಹೋಗಿ ರಸ್ತೆ ಗುಂಡಿ ಬೀಳುತ್ತವೆ.ಆಗಾಗ ಗ್ರಾಮಸ್ಥರೇ ಚರಂಡಿ ಸರಿಪಡಿಸಿಕೊಂಡು ಹೋಗುವುದು ಬಿಟ್ಟರೆ ಯಾರು ಅಧಿಕಾರಿಗಳು ಕ್ಯಾರೆ ಅನ್ನದೆ ಸುಮ್ಮನಿರುತ್ತಾರೆ.

ರಸ್ತೆಗಾಗಿ ಹಲವಾರು ಭಾರೀ ಮನವಿ.
ಮೇರುತಿ ಬಡಾವಣೆಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ರಸ್ತೆ ಹೊಂಡಗುಂಡಿಗಳಿಂದಲೇ ಕೂಡಿದ್ದು ಓಡಾಡಲು ಆಗದೆ ಇರುವ ಪರಿಸ್ಥಿತಿ ಎದುರಾಗಿದೆ, ನಾವು ಬಹಳಷ್ಟು ಭಾರೀ ರಸ್ತೆಗಾಗಿ ಮನವಿ ಮಾಡಿದ್ದೇವೆ ನಮ್ಮ ಮನವಿಗೆ ಕೇವಲ ಭರವಸೆ ಮಾತ್ರ ಕೊಡುವುದು ಬಿಟ್ಟರೆ ರಸ್ತೆ ಆಗುತ್ತಿಲ್ಲ. ಹೀಗಾಗಿ ಗ್ರಾಮಸ್ಥರೆಲ್ಲ ಸೇರಿ ಈ ತೀರ್ಮಾನ ಮಾಡಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರು.

ಅತ್ತಿಕೊಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹದಗೆಟ್ಟ ರಸ್ತೆಗಳು ಆಳುವವರ ನಿರ್ಲಕ್ಷ್ಯ.
ಅತ್ತಿಕೊಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬೆತ್ತದಕೊಳಲು, ಬೆಂಡೆಹಕ್ಲು, ಕವನಳ್ಳ, ಹೊನ್ನಗುಂಡಿ, ನೆಫಾ, ಅಣಕಲುಮಕ್ಕಿ, ಕಲ್ಲುಗುಡ್ಡೆ ರಸ್ತೆ, ದೊಡ್ಡಬಿಳಾಲು ರಸ್ತೆಗಳು ಇ ಓಡಾಡದ ಸ್ಥಿತಿಗೆ ಬಂದು ನಿಂತಿದ್ದು ಗ್ರಾಮಸ್ಥರೇ ಆಗಾಗ ಮಣ್ಣು ಹಾಕಿ ಗುಂಡಿಗಳನ್ನು ಮುಚ್ಚುವುದರಿಂದ ತಕ್ಕ ಮಟ್ಟಿಗೆ ಓಡಾಡಲು ಆಗುತ್ತಿದೆ.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!