Tuesday, November 24, 2026
Homeಜಿಲ್ಲಾಸುದ್ದಿಶೃಂಗೇರಿ ಕ್ಷೇತ್ರದಲ್ಲಿ ಶಾಸಕರಿಗೆ ನೊಂದ ಜೀವಗಳ ಬೇಸರದ ಅಭಿನಂದನೆ ಬ್ಯಾನರ್

ಶೃಂಗೇರಿ ಕ್ಷೇತ್ರದಲ್ಲಿ ಶಾಸಕರಿಗೆ ನೊಂದ ಜೀವಗಳ ಬೇಸರದ ಅಭಿನಂದನೆ ಬ್ಯಾನರ್

Telegram Group
Join Now

ಚಿಕ್ಕಮಗಳೂರು : ಜಿಲ್ಲೆಯ ಶೃಂಗೇರಿ ಕ್ಷೇತ್ರದ ವ್ಯಾಪ್ತಿಗೆ ಒಳ ಪಡುವ ಖಾಂಡ್ಯದಲ್ಲಿ “ನಮ್ಮ ಮಲೆನಾಡಿನ ರೈತರ ಬದುಕನ್ನು ಕಸಿದುಕೊಳ್ಳಲು ಬೇರೆ ಜಿಲ್ಲೆಯಿಂದ ನಮ್ಮ ಭದ್ರಾ ಅಭಯಾರಣ್ಯಕ್ಕೆ ಸುಮಾರು 50 ಕ್ಕೂ ಹೆಚ್ಚಿನ ಆನೆಗಳನ್ನು ಕರೆ ತರುತ್ತಿರುವ ನಮ್ಮ ಕ್ಷೇತ್ರದ ಶಾಸಕರು ಮತ್ತು ಸರ್ಕಾರಕ್ಕೂ ಅಭಿನಂದನೆ ಕೋರುತ್ತಿರುವ ಮಲೆನಾಡಿನ ರೈತರು” ಸ್ವಾಗತ ಬಯಸುವ ಖಾಂಡ್ಯ ಹೋಬಳಿಯ ಮುಗ್ಧ ಜನರು ಎಂಬ ಬ್ಯಾನರ್ ಹಾಕಲಾಗಿದೆ.

ಖಾಂಡ್ಯ ಹೋಬಳಿಯಲ್ಲಿ ಆನೆ ದಾಳಿಯಿಂದ ಸಾವುಗಳು ಆಗಿದ್ದು ಬಿಳುಕೊಪ್ಪ,ಕುಂಬರಗೋಡು,ಹುಣಸೇಹಳ್ಳಿ, ಅಂಡವಾನೆ,ಹಾಗೂ ಸುತ್ತಮುತ್ತಲಿನ ರೈತರು ನಿತ್ಯ ಈ ಆನೆ ದಾಳಿಯಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲಾಗದೆ ಪರದಾಡುತ್ತಿದ್ದಾರೆ ಇಂತದರಲ್ಲಿ ಮತ್ತಷ್ಟು ಆನೆಗಳನ್ನು ಇಲ್ಲಿ ಕರೆತಂದು ಬಿಡುವುದರಿಂದ ಬೆಳೆಗಳು ಬಿಡಿ ಜೀವಗಳು ಕೂಡ ಉಳಿಯದ ಸ್ಥಿತಿ ನಿರ್ಮಾಣವಾಗಲಿದೆ ಎಂದು ನೋವಿನಿಂದ ಗ್ರಾಮಸ್ಥರು ಅಭಿಪ್ರಾಯ ತಿಳಿಸಿದ್ದಾರೆ.

ನಮ್ಮ ಶಾಸಕರ ಕೈಯಲ್ಲಿ ಚೆಕ್ ಹಾಗೂ ಭರವಸೆ ಬಿಟ್ಟರೆ ಬೇರೆ ಏನು ಮಾಡಲು ಆಗದು ಎಂದು ನಮಗೆ ಅರ್ಥವಾಗಿದೆ.ಕನಿಷ್ಠ ಪಕ್ಷ ಸೋಲಾರ್ ಬೇಲಿಗಳನ್ನಾದ್ರು ಮಾಡಿಸಿ ಮಲೆನಾಡಿನ ಜೀವ ಮತ್ತು ಜೀವನವನ್ನು ರಕ್ಷಿಸಿ ನಂತರ ರಾಜಕೀಯ ಮಾಡಿ.ಆನೆ ದಾಳಿಗೆ ಬಲಿಯಾದರೆ ಪ್ರತಿಭಟನೆಯೂ ಮಾಡುವ ಹಾಗಿಲ್ಲ. ಮಾಡಿದರೆ ಲಾಠಿ ಪ್ರಯೋಗವೂ ನಮ್ಮ ಹೋಬಳಿಯಲ್ಲಿ ಆಗಿದೆ.

ಬದುಕು ಜೀವವೋ? ನೋವೋ? ಎಂಬ ಪರಿಸ್ಥಿತಿ ಗೆ ಬಂದು ನಿಂತಿದೆ ನಮ್ಮ ಹೋಬಳಿಯಲ್ಲಿ. ಹೀಗಾಗಿ ನಾವು ಬೇಸರದಿಂದ ಬ್ಯಾನರ್ ಹಾಕಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರು.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!