ಶೃಂಗೇರಿ: ಕ್ಷೇತ್ರದ ಶಾಸಕರಾದ ಟಿಡಿ ರಾಜೇಗೌಡ ರಾಜೀನಾಮೆ ಕೊಡುವ ನಾಟಕ ಮಾಡಬಾರದು ನೀವು ರಾಜೀನಾಮೆ ಕೊಡಲು ಅಲ್ಲ ಶಾಸಕರಾಗಿದ್ದು ನೀವು ಜನರನ್ನು ರಕ್ಷಣೆ ಮಾಡುವ ಕೆಲಸ ಮಾಡಿ ಎಂದು ರಾಜೇಗೌಡರ ರಾಜೀನಾಮೆ ಕುರಿತಂತೆ ಜೀವರಾಜ್ ಮಾತನಾಡಿದರು.
ರಾಜೀನಾಮೆ ಕೊಡುವಷ್ಟು ಒಳ್ಳೆಯ ಮನಸ್ಸು ರಾಜೇಗೌಡರಿಗೆ ಇಲ್ಲ ಜನರ ಸಿಂಪತಿಗಾಗಿ ರಾಜಕೀಯ ನಾಟಕ ಮಾಡುವ ಬದಲು ಕ್ಷೇತ್ರದ ಜನರ ರಕ್ಷಣೆಗೆ ಏನು ಮಾಡಬೇಕು ಅದನ್ನು ಮಾಡಿ ಕ್ಷೇತ್ರದ ಜನರ ರಕ್ಷಣೆ ಮಾಡಿ ಎಂದರು.

ಸುಳ್ಳು ಭರವಸೆಗಳನ್ನು ಕೊಡುವುದನ್ನು ಬಿಡಿ. ನಿಮ್ಮದೇ ಸರ್ಕಾರ ನಿಮ್ಮದೇ ಸಚಿವರು ನಿಮ್ಮ ಮಾತೇ ಕೇಳದ ಪರಿಸ್ಥಿತಿಯಲ್ಲಿ ಇದ್ದಾರೆ. ನೀವು ಸರ್ಕಾರಕ್ಕೆ ರಾಜೇನಾಮೆ ನೀಡುತ್ತೇನೆ ಎಂದು ಎಚ್ಚರಿಕೆ ನೀಡುವುದನ್ನು ಬಿಡಿ. ನಿಮ್ಮ ರಾಜೀನಾಮೆಯ ಅಗತ್ಯ ನಮಗಿಲ್ಲ. ನಮಗೆ ಅಗತ್ಯವಿರುವುದು ಮಲೆನಾಡಿಗರ ಬದುಕು ಅಷ್ಟೇ. ಇನ್ನಾದರು ನಾಟಕ ಮಾಡದೆ ರೈತರ ಪರವಾಗಿ ಕೆಲಸ ಮಾಡಿ ಎಂದು ಗುಡುಗಿದ್ದಾರೆ.
ಕಾಂಗ್ರೆಸ್ ಶಾಸಕರು ಬಹಳಷ್ಟು ಸಲ ರಾಜೀನಾಮೆ ಕೊಟ್ಟಿರುವುದನ್ನು ನಾವು ನೋಡಿದ್ದೇವೆ. ಇವೆಲ್ಲ ಸಿಂಪತಿಗಷ್ಟೇ, ಸಮಸ್ಯೆಗಳಿಗಲ್ಲ ಎಂದು ಹೇಳಿದರು
