Tuesday, November 24, 2026
Homeಜಿಲ್ಲಾಸುದ್ದಿಚಿಕ್ಕಮಗಳೂರಲ್ಲಿ ಮಾನವ - ವನ್ಯಜೀವಿ ಸಂಘರ್ಷದ ನಡುವೆ ವಿದ್ಯುತ್‌ ತಂತಿ ಬೇಲಿಗೆ ಸಿಲುಕಿ ಒಂಟಿ ಸಲಗ...

ಚಿಕ್ಕಮಗಳೂರಲ್ಲಿ ಮಾನವ – ವನ್ಯಜೀವಿ ಸಂಘರ್ಷದ ನಡುವೆ ವಿದ್ಯುತ್‌ ತಂತಿ ಬೇಲಿಗೆ ಸಿಲುಕಿ ಒಂಟಿ ಸಲಗ ಬ*ಲಿ!

Telegram Group
Join Now

ಚಿಕ್ಕಮಗಳೂರು:  ಕಾಫಿನಾಡಲ್ಲಿ ಒಂದೆಡೆ ಕಾಡಾನೆ ಸ್ಥಳಾಂತರ ಹಾಗೂ ಮಾನವ ವನ್ಯಜೀವಿ ಸಂಘರ್ಷದ ಕಿಚ್ಚು ತೀವ್ರಗೊಂಡಿದ್ದರೆ  ಮತ್ತೊಂದೆಡೆ ಅಕ್ರಮ ವಿದ್ಯುತ್ ಬೇಲಿಗೆ ಒಂಟಿ ಸಲಗವೊಂದು ಬಲಿಯಾಗಿರುವ ದಾರಣ ಘಟನೆ ಕಡೂರು ತಾಲೂಕಿನ ಎಮ್ಮೆದೊಡ್ಡಿ ಬಳಿಯ ಸಗನಿ ಬಸವನಹಳ್ಳಿಯಲ್ಲಿ ನಡೆದಿದೆ.

ಸುಮಾರು 15 ವರ್ಷದ ವಯಸ್ಸಿನ ಗಂಡು ಆನೆ ಆಹಾರ ಹರಸುತ್ತ ಜೋಳದ ಹೊಲಕ್ಕೆ ನುಗ್ಗಿದ ವೇಳೆ ಈ ದುರ್ಘಟನೆ ಸಂಭವಿಸಿದೆ. ಕಾಡು ಪ್ರಾಣಿಗಳ ಹಾವಳಿಯನ್ನು ತಡೆಯುವ ಉದ್ದೇಶದಿಂದ ಜಮೀನಿನ ಮಾಲೀಕರು ಅಕ್ರಮ ವಿದ್ಯುತ್ ತಂತಿಯನ್ನು ಅಳವಡಿಸಿದ್ದರು ಈ ವೇಳೆ ಆಹಾರ ಹುಡುಕುತ್ತ ಹೊಲಕ್ಕೆ ಬಂದ ಆನೆಗೆ ತಂತಿ ತಗಳಿದ್ದು ವಿದ್ಯುತ್ ಪ್ರವಹಿಸಿದ ಪರಿಣಾಮ ಸ್ಥಳದಲ್ಲಿ ಸಾವನ್ನಪ್ಪಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ  ಕಡೂರು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಆನೆ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಜಮೀನಿಗೆ ವಿದ್ಯುತ್ ತಂತಿಯ ಅಳವಡಿಸಿದ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು ಪರಾರಿಯಾಗಿರುವ ಆರೋಪಿಯ ಪತ್ತೆಗೆ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!