Thursday, November 26, 2026
Homeಇತರೆಸಕಲೇಶಪುರದಲ್ಲಿ ಗೋಮಾಂಸ ಸಾಗಾಟ: ಕಾರು ವಶಕ್ಕೆ, ಚಾಲಕ ಪರಾರಿ

ಸಕಲೇಶಪುರದಲ್ಲಿ ಗೋಮಾಂಸ ಸಾಗಾಟ: ಕಾರು ವಶಕ್ಕೆ, ಚಾಲಕ ಪರಾರಿ

Telegram Group
Join Now

ಸಕಲೇಶಪುರ:  ಅಕ್ರಮ ಗೋಮಾಂಸ ಸಾಗಾಟ ಆರೋಪದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ, ಮಾಂಸವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಹೌದು ..  ಐಷಾರಾಮಿ ಹೊಂಡೈ i20 ಕಾರಿನಲ್ಲಿ ಗೋಮಾಂಸ ಸಾಗಾಟ ಮಾಡುತ್ತಿದ್ದು  ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರ ಮಾಹಿತಿ ಮೇರೆಗೆ ಪೊಲೀಸರ ದಾಳಿ ನಡೆಸಿದ್ದು  KA-53-P-2942 ನೋಂದಣಿ ಸಂಖ್ಯೆಯ ಬಿಳಿ ಬಣ್ಣದ ಕಾರು ವಶಕ್ಕೆ ಪಡೆಯಲಾಗಿದೆ.

ಕುಶಾಲನಗರ ಬಡಾವಣೆಗೆ ನಿತ್ಯ ಗೋಮಾಂಸ ಸಾಗಾಟವಾಗುತ್ತಿರುವ ಆರೋಪ ಕೇಳಬಂದ ಹಿನ್ನೆಲೆಯಲ್ಲಿ  ರಾಷ್ಟ್ರೀಯ ಹೆದ್ದಾರಿಯಿಂದ ಸಕಲೇಶಪುರಕ್ಕೆ ಬರುತ್ತಿದ್ದ ಕಾರಿನ ಮೇಲೆ ಪೊಲೀಸರ ನಿಗಾ ವಹಿಸಿದ್ದರು ಹಾಗೆ ಬೈಪಾಸ್ ರಸ್ತೆಯಿಂದ ಕುಶಾಲನಗರದತ್ತ ತಿರುಗುತ್ತಿದ್ದಂತೆ ಕಾರು ಅಡ್ಡಗಟ್ಟಿದ ಪೊಲೀಸರು ಈ ವೇಳೆ  ಪೊಲೀಸರನ್ನು ಕಂಡು ಕಾರು ಬಿಟ್ಟು ಪರಾರಿಯಾದ ಚಾಲಕ ಆದರೆ ಕಾರನ್ನು ಪರಿಶೀಲಿಸಿದಾಗ  ಕಾರಿನ ಹಿಂಬದಿ ಸೀಟ್ ಹಾಗೂ ಡಿಕ್ಕಿಯಲ್ಲಿದ್ದ ಚೀಲಗಳಲ್ಲಿ ಗೋಮಾಂಸ ಪತ್ತೆಯಾಗಿವೆ.

ತಕ್ಷಣ ಕಾರನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ ಸಕಲೇಶಪುರ ನಗರ ಪೊಲೀಸರು  ಪರಾರಿಯಾದ ಚಾಲಕನಿಗಾಗಿ ಶೋಧ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!