ಚಿಕ್ಕಮಗಳೂರು: ನಗರದ ಹೊರವಲಯದ ಮತ್ತಾವರ ಸುತ್ತಮುತ್ತ ಸಂಚರಿಸ್ತಾ ಆತಂಕ ಸೃಷ್ಟಿಸಿರೋ ಒಂಟಿ ಸಲಗ ಸೆರೆಗೆ ಆಪರೇಷನ್ ಆರಂಭಿಸಲಾಗಿದೆ.
ಮತ್ತಾವರದ ಕ್ಯಾಂಪ್ನಲ್ಲಿ ಆರು ಕುಮ್ಕಿ ಆನೆಗಳಾದ ಸಾಗರ್, ಜ್ಯೂನಿಯರ್ ಅರ್ಜುನ, ಭೀಷ್ಮ, ಸುಗ್ರೀವ, ಮಾಣಿಕ್ಯ, ಅಯ್ಯಪ್ಪಗೆ ವಿಶೇಷ ಪೂಜೆ ಸಲ್ಲಿಸಿ ಕಾರ್ಯಾಚರಣೆ ಶುರು ಮಾಡಲಾಗಿದೆ.

DFO ಬೋರಯ್ಯ ನೇತೃತ್ವದಲ್ಲಿ ಫಾರೆಸ್ಟ್ ಆಫೀಸರ್ಸ್, ಸಿಬ್ಬಂದಿ ಫೀಲ್ಡ್ಗೆ ಇಳಿದಿದ್ದಾರೆ. ಕುಮ್ಕಿ ಆನೆಗಳ ಸಹಾಯದಿಂದ ಒಂಟಿ ಸಲಗ ಹೆಡೆಮುರಿ ಕಟ್ಟಲು ಕಾಡಿಗೆ ತೆರಳಿದ್ದಾರೆ.
ಕಳೆದ 10 ದಿನದಿಂದ ಒಂಟಿ ಆನೆ ಉಪಟಳಕ್ಕೆ ಆತಂಕಗೊಂಡಿರೋ ಸ್ಥಳೀಯರು, ಆನೆ ಸೆರೆ ಹಿಡಿಯುವಂತೆ ಒತ್ತಾಯಿಸಿದ್ರು. ಇದೀಗ ಆಪರೇಷನ್ ಸ್ಟಾರ್ಟ್ ಆಗಿದೆ.
