Friday, November 27, 2026
Homeಜಿಲ್ಲಾಸುದ್ದಿಕೊಟ್ಟ ಭರವಸೆಯ ಈಡೇರಿಕೆಗೆ ಮುಂದಾದ ಶಾಸಕ ಟಿ.ಡಿ.ರಾಜೇಗೌಡ: ಬೆಳ್ಳಂಗಿ ರಸ್ತೆ ಬದಿಯ ಗಿಡಗಂಟಿಗಳ ತೆರವು!

ಕೊಟ್ಟ ಭರವಸೆಯ ಈಡೇರಿಕೆಗೆ ಮುಂದಾದ ಶಾಸಕ ಟಿ.ಡಿ.ರಾಜೇಗೌಡ: ಬೆಳ್ಳಂಗಿ ರಸ್ತೆ ಬದಿಯ ಗಿಡಗಂಟಿಗಳ ತೆರವು!

Telegram Group
Join Now

ಎನ್ ಆರ್ ಪುರ: ತಾಲೂಕಿನಲ್ಲಿ ಕಾಡಾನೆಗಳ ದಾಳಿಗೆ ಕೃಷ್ಣಮೂರ್ತಿಯವರು ಬಲಿಯಾಗಿದ್ದರು ಆ ದಿನ ನಡೆದ ಪ್ರತಿಭಟನೆಯಲ್ಲಿ ಶಾಸಕರ ಮುಂದೆ ರೈತರು ಹಾಗೂ ಗ್ರಾಮಸ್ಥರು ಹಲವು ಬೇಡಿಕೆಗಳನ್ನು ಇಟ್ಟಿದ್ದರು ಅದರಲ್ಲಿ ಒಂದು ಹೆನ್ನಂಗಿ ಬೆಳ್ಳಂಗಿ ರಸ್ತೆ ಬದಿಯ ಗಿಡಗಂಟಿಗಳ ತೆರವು ಮಾಡಬೇಕು ಈ ರಸ್ತೆಯಲ್ಲಿ ಶಾಲಾ ಮಕ್ಕಳು ಓಡಾಡುತ್ತಿರುತ್ತಾರೆ ಗಿಡಗಂಟಿಗಳು ರಸ್ತೆಯನ್ನೆ ಮುಚ್ಚಿವೆ ಅಂತರದಲ್ಲಿ ಆನೆ ರಸ್ತೆ ಬದಿಯಲ್ಲೆ ನಿಂತರು ಕಾಣುವುದಿಲ್ಲ. ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯ ಪಡುತ್ತಿರುವುದಾಗಿ ತಿಳಿಸಿದ್ದರು.

ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು, ಶಾಸಕರು ಆದೆಷ್ಟು ಬೇಗ ತೆರವುಗೊಳಿಸುತ್ತೇವೆ ಎಂದಿದ್ದರು ಹಾಗೂ ತೆರವಿನ ಜವಾಬ್ದಾರಿ ಹೊತ್ತು ಭರವಸೆಯನ್ನು ಶಾಸಕರು ನೀಡಿದ್ದರು. ಕೊಟ್ಟ ಮಾತಿನಂತೆ ಈಗ ಅರಣ್ಯ ಇಲಾಖೆಯ ವತಿಯಿಂದ ರಸ್ತೆಯ ಇಕ್ಕೆಲ್ಲಗಳಲ್ಲಿ ಸುಮಾರು 20 ಅಡಿ ವ್ಯಾಪ್ತಿಯಷ್ಟು ರಸ್ತೆ ಬದಿಗಳನ್ನು ಕಡಿದು ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ.

ಕೊಟ್ಟ ಹಲವು ಬೇಡಿಕೆಗಳಲ್ಲಿ ಈಗ ಒಂದನ್ನು ಈಡೇರಿಸುತ್ತಿದ್ದಾರೆ ಶಾಸಕರಾದ ಟಿಡಿ ರಾಜೇಗೌಡರು.
ಇನ್ನುಳಿದ ಭರವಸೆಗಳನ್ನು ಯಾವಾಗ ಈಡೇರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!