Saturday, November 28, 2026
Homeಜಿಲ್ಲಾಸುದ್ದಿಕಾಫಿ ತೋಟಗಳಲ್ಲಿ ಮತ್ತೆ ಕಾಡಾನೆ ಹಾವಳಿ: ಹಣ್ಣು ಕೊಯ್ಲಿಗೆ ತೆರಳಿದ್ದವರು ಹೆದರಿ ಓಡಿ ಬಂದ 60...

ಕಾಫಿ ತೋಟಗಳಲ್ಲಿ ಮತ್ತೆ ಕಾಡಾನೆ ಹಾವಳಿ: ಹಣ್ಣು ಕೊಯ್ಲಿಗೆ ತೆರಳಿದ್ದವರು ಹೆದರಿ ಓಡಿ ಬಂದ 60 ಕಾರ್ಮಿಕರು

Telegram Group
Join Now

ಮೂಡಿಗೆರೆ: ಹಾಸನದ ಬೇಲೂರಿನ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಾವಳಿ ಮತ್ತೆ ಮುಂದುವರಿದಿದೆ. ಕಾಡಾನೆ ಕಂಡು ಭಯಭೀತರಾದ 60ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಬಿಟ್ಟು ತೋಟದಿಂದ ಹೊರ ಬಂದಿದ್ದಾರೆ.

ಕಾಫಿ ಹಣ್ಣು ಕೊಯ್ಲಿಗೆ ತೆರಳಿದ್ದವರು ಜೀವ ಭಯದಿಂದ ಓಡಿ ಈಚೆ ಬಂದಿದ್ದು, ಆನೆಗಳ ಉಪಟಳದಿಂದ ಹೊಟ್ಟೆಪಾಡಿಗೆ ಹೊಡೆತ ಬಿದ್ದಿದೆ. ಕೆಲಸ ಇಲ್ಲದಿದ್ದರೆ ಹೊಟ್ಟೆಗೆ ತಣ್ಣೀರೇ ಗತಿ ಅಂತಾ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.

ಇತ್ತ ಮಾಕೋನಹಳ್ಳಿ- ನಂದೀಪುರ ಗ್ರಾ. ಪಂ ವ್ಯಾಪ್ತಿಯಲ್ಲಿ ಆನೆಗಳ ಆಟಾಟೋಪ ಹೆಚ್ಚಾಗಿದ್ದು, ಬೆಳೆಯನ್ನ ನಾಶ ಮಾಡಿವೆ. ಇದ್ರಿಂದ ರೊಚ್ಚಿಗೆದ್ದಿರೋ ರೈತರು ಕಾಡಾನೆಗಳ ಕಾಟಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ರಸ್ತೆ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!