Sunday, November 29, 2026
Homeಗ್ರೇಟರ್ ಬೆಂಗಳೂರುAsha Workers Protest: ಎರಡು ಸಾವಿರ ಗೌರವ ಧನ ಹೆಚ್ಚಳಕ್ಕೆ ವಿರೋಧ:ಸರ್ಕಾರದ ನಿರ್ಧಾರಕ್ಕೆ ʻಆಶಾʼಗಳು ಅಸಮಾಧಾನ

Asha Workers Protest: ಎರಡು ಸಾವಿರ ಗೌರವ ಧನ ಹೆಚ್ಚಳಕ್ಕೆ ವಿರೋಧ:ಸರ್ಕಾರದ ನಿರ್ಧಾರಕ್ಕೆ ʻಆಶಾʼಗಳು ಅಸಮಾಧಾನ

Telegram Group
Join Now

ಬೆಂಗಳೂರು: ಹೋರಾಟ ನಿರತ ಆಶಾ ಕಾರ್ಯಕರ್ತೆಯರ ನಿಯೋಗದ ಜೊತೆ ಆರೋಗ್ಯ ಸಚಿವ ಯು.ಟಿ. ಖಾದರ್ ಸಭೆ ನಡೆಸಿದ್ದಾರೆ. ಈ ವೇಳೆ ಸಿಎಂ ಡಿ.ಕೆ ಶಿವಕುಮಾರ್‌ ಕಳುಹಿಸಿದ 2,000 ರೂ. ಹೆಚ್ಚಳದ ಭರವಸೆಯ ಸಂದೇಶವನ್ನು ಆಶಾ ಕಾರ್ಯಕರ್ತರ ಮುಂದೆ ಬಹಿರಂಗಪಡಿಸಿದ್ದಾರೆ. ಆದರೆ ಈ ಭರವಸೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲ.

ನೂತನ ಸರ್ಕಾರಿ ನಿವಾಸದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಯು.ಟಿ ಖಾದರ್ ಚರ್ಚೆ ನಡೆಸಿದರು. ಬಳಿಕ 20 ಜನರ ಆಶಾ ಕಾರ್ಯಕರ್ತೆಯರ ನಿಯೋಗದ ಜೊತೆ ಸಭೆ ನಡೆಸಿದರು. ಈ ವೇಳೆ ಆಶಾ ಕಾರ್ಯಕರ್ತೆಯರ ಅಹವಾಲನ್ನು ಸಚಿವರು ಆಲಿಸಿದರು

ಸಿಎಂ ಜೊತೆಗೆ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ನಾಗಲಕ್ಷ್ಮಿಯವರು ಫೋನ್‌ ಕರೆಯಲ್ಲಿ ಚರ್ಚಿಸಿದರು. ಈ ವೇಳೆ, ಸಿಎಂ 2,000 ರೂ. ಹೆಚ್ಚಳದ ಭರವಸೆ ನೀಡಿದರು. ಈ ಭರವಸೆಯನ್ನೂ ಆಶಾ ಕಾರ್ಯಕರ್ತೆಯರು ಒಪ್ಪಲಿಲ್ಲ.

ಮಾಜಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದರಲ್ಲಿ 1,000 ರೂ. ಸೇರಿಸಲು ಕೇಳಿದ್ದಾರೆ. ಒಟ್ಟು 3,000 ರೂ.ಗೆ ಆಶಾ ಕಾರ್ಯಕರ್ತೆಯರು ಒತ್ತಾಯಿಸುತ್ತಿದ್ದಾರೆ. 2,000 ರೂ.ಗೆ ಸರ್ಕಾರ ಒಪ್ಪಿದೆ. 2,000 ರೂ. ಕೊಟ್ಟರೇ ವರ್ಷಕ್ಕೆ 100 ಕೋಟಿ ರೂ. ಆಗಬಹುದು. ಈ ಬಗ್ಗೆ ಸಭೆಯಲ್ಲಿ ನಿರ್ಧಾರ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!