Saturday, November 28, 2026
Homeಜಿಲ್ಲಾಸುದ್ದಿಕಾಡಾನೆ ಉಪಟಳ ಅಹೋರಾತ್ರಿ ಧರಣಿ: ತೋಟ‌ ಕಳೆದುಕೊಂಡಿದ್ದ ರೈತ ಪ್ರಹ್ಲಾದ್ʼರಿಂದ ವಿಷಸೇವನೆಗೆ ಯತ್ನ!

ಕಾಡಾನೆ ಉಪಟಳ ಅಹೋರಾತ್ರಿ ಧರಣಿ: ತೋಟ‌ ಕಳೆದುಕೊಂಡಿದ್ದ ರೈತ ಪ್ರಹ್ಲಾದ್ʼರಿಂದ ವಿಷಸೇವನೆಗೆ ಯತ್ನ!

Telegram Group
Join Now

ಚಿಕ್ಕಮಗಳೂರು: ಕಾಡಾನೆಗಳ ನಿರಂತರ ಹಾವಳಿ ಹಾಗೂ ಅವೈಜ್ಞಾನಿಕ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿ ಮಲೆನಾಡಿನ ರೈತರ ತಾಳ್ಮೆಯ ಕಟ್ಟೆ ಒಡೆದಿದ್ದು, ಇಂದಿನಿಂದ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿಯಲ್ಲಿ ಬೃಹತ್ ಅಹೋರಾತ್ರಿ ಧರಣಿ ಶುರು ಮಾಡಿದ್ದಾರೆ.ಮಾಕೋನಹಳ್ಳಿ ಹಾಗೂ ನಂದಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ರೈತರು ಧರಣಿಯಲ್ಲಿ ಭಾಗಿಯಾಗಿದ್ದಾರೆ.

ಆದರೆ ಇದರ ಮಧ್ಯ ಕಾಡಾನೆ ದಾಳಿಯಿಂದ ತೋಟ‌ ಕಳೆದುಕೊಂಡಿದ್ದ ರೈತ ಪ್ರಹ್ಲಾದ್ ಅವರು ಮನನೊಂದು  ಎಂಎಲ್ಸಿ ಗಾಯಿತ್ರಿ ಶಾಂತೇಗೌಡ, DFO ಬೋರಯ್ಯ ಮುಂದೆಯೇ ವಿಷ ಸೇವನೆಗೆ ಮುಂದಾಗಿದ್ದಾರೆ. ಆದರೆ  ವಿಷದ ಬಾಟಲಿ ಕಿತ್ತುಕೊಂಡ ಸ್ಥಳೀಯರು, ಪೊಲೀಸರು

ತೋಟ ನೆಲಸಮ ಆಗಿದ್ದನ್ನ ಕಂಡು ಆನೆ ತನ್ನನ್ನು ತುಳಿದು ಸಾಯಿಸಲಿ ಅಂತಾ ಆಕ್ರೋಶ ಹೊರ ಹಾಕಿದ್ರು. ಇನ್ನು ಡಿಎಫ್‌ಒ ಮಾತಿಗೆ ಒಪ್ಪದ ಪ್ರತಿಭಟನಾಕಾರರು, ಶಾಶ್ವತ ಪರಿಹಾರ ಬೇಕು. ಸ್ಥಳಕ್ಕೆ ಶಾಸಕಿ ನಯನಾ ಮೋಟಮ್ಮ ಬರಬೇಕು ಅಂತಾ ಪಟ್ಟು ಹಿಡಿದಿದ್ರು. ಆನೆಗಳ ಮುಕ್ತಿ ಸಿಗುವವರೆಗೆ ಹೋರಾಟ ನಿಲ್ಲಿಸೋಲ್ಲ ಅಂತಾ ಅರಣ್ಯ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.

ಕಾರ್ಬೈಲು ಗ್ರಾಮದಲ್ಲಿ 20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ದಾಳಿ ನಡೆಸಿ ಕಾಫಿ, ಅಡಿಕೆ, ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನು ಸಂಪೂರ್ಣವಾಗಿ ನಾಶಪಡಿಸಿದ್ದು ಕಷ್ಟಪಟ್ಟು ಬೆಳೆಸಿದ ಬೆಳೆಗಳು ಕಣ್ಣೆದುರೇ ನಾಶವಾಗಿದ್ದರಿಂದ ರೈತ ಪ್ರಹ್ಲಾದ್ ತೋಟದಲ್ಲೇ ಕುಳಿತು ಕಣ್ಣೀರು ಹಾಕಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!