ಮಂಗಳೂರು : ಹಳೆಯ ಮನೆಯನ್ನು ಕೆಡವುತ್ತಿದ್ದ ವೇಳೆ ಇಬ್ಬರು ಮಣ್ಣಿನಡಿ ಸಿಲುಕಿ ಮೃತಪಟ್ಟ ಘಟನೆ ನಗರದ ಜೈಲ್ ರಸ್ತೆಯಲ್ಲಿ ಸಂಭವಿಸಿದೆ.
ಜೇಮ್ಸ್ ಜತ್ತನ್ನ & ಅಡ್ವಿನ್ ಜೆರಾಲ್ಡ್ ಮೊಬಿನ್ ಮೃತ ದುರ್ದೈವಿಗಳು. ಜೈಲ್ ರಸ್ತೆಯಲ್ಲಿದ್ದ ಹಳೆಯ ಮನೆಯನ್ನು ಕೆಡವಲಾಗುತ್ತಿತ್ತು. ಈ ವೇಳೆ ಬೃಹತ್ ಗೋಡೆ ಇಬ್ಬರ ಮೇಲೆ ಬಿದ್ದಿದೆ. ಗೋಡೆ ಕೆಳಗೆ ಸಿಲುಕಿದ ಪರಿಣಾಮ ತೀವ್ರ ಸ್ವರೂಪದ ಪೆಟ್ಟಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.



