Monday, March 30, 2026
Homeಕ್ರೈಮ್ದರ್ಶನ್‌ ಬಿಡುಗಡೆಗೆ ಆಗ್ರಹಿಸಿ ವಕೀಲ ಜಗದೀಶ್‌ ಕುಮಾರ್‌ ನೇತೃತ್ವದಲ್ಲಿ ನಡೆಯಲಿದೆ ಪ್ರತಿಭಟನೆ..!

ದರ್ಶನ್‌ ಬಿಡುಗಡೆಗೆ ಆಗ್ರಹಿಸಿ ವಕೀಲ ಜಗದೀಶ್‌ ಕುಮಾರ್‌ ನೇತೃತ್ವದಲ್ಲಿ ನಡೆಯಲಿದೆ ಪ್ರತಿಭಟನೆ..!

ಬೆಂಗಳೂರು : ಚಿತ್ರದುರ್ಗದ ರೇಣುಕಸ್ವಾಮಿ ಬರ್ಬರ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್‌ ಬಂಧನವಾಗಿ 100 ದಿನ ಕಳೆದಿದೆ. ಜೈಲಿನಲ್ಲಿರುವ ದರ್ಶನ್‌ ಬೇಲ್‌ಗಾಗಿ ಕೋರ್ಟ್‌ಗೆ ಅರ್ಜಿಯನ್ನೂ ಹಾಕಿದ್ದಾರೆ. ಈ ನಡುವೆ ದರ್ಶನ್‌ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆಗೆ ಅಭಿಮಾನಿಗಳು ಮುಂದಾಗಿದ್ದಾರೆ.
ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ವಕೀಲ ಜಗದೀಶ್‌ ಕುಮಾರ್‌ ಈ ಪ್ರತಿಭಟನೆಯ ನೇತೃತ್ವವನ್ನು ವಹಿಸಿಕೊಂಡಿದ್ದಾರೆ. ಸೆಪ್ಟೆಂಬರ್‌ 23ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ ಬಳಿ ಪ್ರತಿಭಟನೆ ನಡೆಯಲಿದೆ. ದರ್ಶನ್‌ಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿರುವ ಜಗದೀಶ್‌ ಕುಮಾರ್‌ , ರಾಜ್ಯಾದೆಲ್ಲೆಡೆ ಇರುವ ದರ್ಶನ್‌ ಅಭಿಮಾನಿಗಳು ಒಟ್ಟಾಗುವಂತೆ ಕರೆ ನೀಡಿದ್ದಾರೆ.
ರೇಣುಕಸ್ವಾಮಿ ಕೊಲೆಯಲ್ಲಿ ರಾಜಕಾರಣಿಯೊಬ್ಬರ ಪ್ರಮುಖ ಪಾತ್ರವಿದೆ. ದರ್ಶನ್‌ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಅಂತ ಆರೋಪಿಸಿರುವ ಜಗದೀಶ್‌ ಕುಮಾರ್‌, ಈಗ ದರ್ಶನ್‌ ಬೀದಿಗಿಳಿದು ಹೋರಾಟಕ್ಕೆ ಮುಂದಾಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!