ಕೊಟ್ಟಿಗೆಹಾರ : ಚಿಂತನೆ ನಡೆಸಿದಾಗ ಮಾತ್ರ ಮನುಷ್ಯ ಕ್ರಿಯಾಶೀಲತೆ ಹೊಂದುತ್ತಾನೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.
ಬಣಕಲ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕಸಾಪ ಬಣಕಲ್ ಹೋಬಳಿ ಘಟಕ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ಸುವರ್ಣ ಮಹೋತ್ಸವ ಪ್ರಯುಕ್ತ ಪ್ರತಿ ಜಿಲ್ಲೆ, ತಾಲ್ಲೂಕು ಹಾಗೂ ಪ್ರತಿ ಗ್ರಾಮಗಳಲ್ಲಿ ನುಡಿ ನಿತ್ಯೋತ್ಸವ ಕಾರ್ಯಕ್ರಮ ನಡೆಸಲು ಚಿಂತನೆ ಮಾಡಲಾಗಿದೆ ಎಂದು ತಿಳಿಸಿದರು.
ಯುರೇಕಾ ಅಕಾಡೆಮಿ ಅಧ್ಯಕ್ಷ ದೀಪಕ್ ದೊಡ್ಡಯ್ಯ ಮಾತನಾಡಿ, ಯಾವುದೇ ಕೆಲಸವನ್ನು ನಾಯಕನ ಜತೆಗೆ ತಂಡವಾಗಿ ನಿರ್ವಹಿಸಿದರೆ ಎಲ್ಲವೂ ಸುಲಭದಲ್ಲಿ ಆಗುತ್ತದೆ ಎಂದರು.

ತಾಲೂಕು ಘಟಕ ಅಧ್ಯಕ್ಷ ಡಿ.ಕೆ. ಲಕ್ಷ್ಮಣ್ ಗೌಡ, ಪ್ರಮುಖರಾದ ಸುರೇಶ್ ಎಸ್.ಶೆಟ್ಟಿ, ಟಿ.ಎಂ. ಆದರ್ಶ್, ಮುಖ್ಯ ಶಿಕ್ಷಕ ಜಿ.ಎಚ್. ಶ್ರೀನಿವಾಸ್, ಮಗ್ಗಲಮಕ್ಕಿ ಗಣೇಶ್, ಶಾಂತಕುಮಾರ್, ಟಿ.ಎಂ.ಗಜೇಂದ್ರ, ಎಲ್.ಬಿ. ರಮೇಶ್, ಬಿ.ಕೆ .ದಿನೇಶ್, ಝರೀನಾ, ಬಿ.ಶಿವರಾಮ ಶೆಟ್ಟಿ, ಬಿ.ಎಂ.ಶಂಕರ್, ಎಲ್.ಬಿ. ಲೋಕೇಶ್ ಮಾತನಾಡಿದರು. ಬಿ.ಕೆ. ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಟಿ.ಎಂ. ಆದರ್ಶ್ ನೂತನ ಅಧ್ಯಕ್ಷ ಬಿ.ಕೆ. ಲೋಕೇಶ್ ಅವರಿಗೆ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.





