Wednesday, July 1, 2026
Homeಕ್ರೈಮ್ಚುನಾವಣಾ ತಕರಾರು ಅರ್ಜಿ ರದ್ದತಿ ಕೋರಿದ್ದ ಶಾಸಕ ಟಿ.ಡಿ. ರಾಜೇಗೌಡಗೆ ಸುಪ್ರೀಂನಲ್ಲೂ ಹಿನ್ನಡೆ..! ಶಾಸಕ ಸ್ಥಾನಕ್ಕೆ...

ಚುನಾವಣಾ ತಕರಾರು ಅರ್ಜಿ ರದ್ದತಿ ಕೋರಿದ್ದ ಶಾಸಕ ಟಿ.ಡಿ. ರಾಜೇಗೌಡಗೆ ಸುಪ್ರೀಂನಲ್ಲೂ ಹಿನ್ನಡೆ..! ಶಾಸಕ ಸ್ಥಾನಕ್ಕೆ ಎದುರಾಗುತ್ತಾ ಆಪತ್ತು..?

Telegram Group
Join Now

ಚಿಕ್ಕಮಗಳೂರು : ಚುನಾವಣಾ ತಕರಾರರು ಅರ್ಜಿ ಸಂಬಂಧ ಶೃಂಗೇರಿ ಕಾಂಗ್ರೆಸ್‌ ಶಾಸಕ ಟಿ.ಡಿ. ರಾಜೇಗೌಡ ಅವರಿಗೆ ಸರ್ವೋಚ್ಚ ನ್ಯಾಯಾಲದಲ್ಲೂ ಹಿನ್ನಡೆಯಾಗಿದೆ.
ಶಾಸಕ ಟಿ.ಡಿ. ರಾಜೇಗೌಡ ಆಯ್ಕೆ ಅಸಿಂಧುಗೊಳಿಸಬೇಕು ಎಂದು ಮಾಜಿ ಶಾಸಕ ಡಿ.ಎನ್.‌ ಜೀವರಾಜ್‌ ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ರದ್ದು ಕೋರಿ ರಾಜೇಗೌಡ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದ ಶಾಸಕರಿಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಶಾಸಕ ಟಿ.ಡಿ. ರಾಜೇಗೌಡ ಅಕ್ರಮವಾಗಿ ಗೆಲುವು ಸಾಧಿಸಿದ್ದಾರೆ. ಕೇವಲ 200 ಮತಗಳ ಅಂತರದಲ್ಲಿ ಗೆದ್ದಿದ್ದು, ಮತದಾನ ಎಣಿಕೆಯಲ್ಲಿ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ಹೀಗಾಗಿ ಟಿ.ಡಿ. ರಾಜೇಗೌಡರ ಆಯ್ಕೆ ಅಸಿಂಧುಗೊಳಿಸಬೇಕು ಎಂದು ಜೀವರಾಜ್‌ ತಕರಾರು ಅರ್ಜಿ ಸಲ್ಲಿಸಿದ್ದರು. ಅದನ್ನು ತಿರಸ್ಕರಿಸಬೇಕೆಂದು ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ಶುಕ್ರವಾರ ನಡೆದು, ಅಂಚೆ ಮತಗಳ ತಿರಸ್ಕಾರ ಕಾನೂನು ಬಾಹಿರ ಎಂಬ ಜೀವರಾಜ್ ವಾದ ಸಮ್ಮತವಾದದ್ದು. ಚುನಾವಣಾ ಅಕ್ರಮ ಕುರಿತಾದ ಜೀವರಾಜ್‌ ಅವರ ವಾದ ಆಲಿಸಿ ನಂತರ ಹೈಕೋರ್ಟ್‌ ತೀರ್ಪು ನೀಡಬೇಕು ಎಂದು ತಿಳಿಸಿದೆ.
ಸುಪ್ರೀಂನಲ್ಲಿ ರಾಜೇಗೌಡರ ಅರ್ಜಿ ತಿರಸ್ಕಾರಗೊಂಡ ಪರಿಣಾಮ ಅವರ ವಿರುದ್ಧದ ಚುನಾವಣಾ ತಕರಾರು ಅರ್ಜಿಯ ವಿಚಾರಣೆ ನಡೆಯಲಿದ್ದು, ಅದನ್ನು ಎದುರಿಸಬೇಕಾಗಿದೆ. ರಾಜೇಗೌಡ ಪರ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಮತ್ತು ಸಂಜಯ್ ನುಲಿ ವಾದ ಮಂಡಿಸಿದ್ದರು. ಜೀವರಾಜ್ ಪರ ಹಿರಿಯ ವಕೀಲರಾದ ಮೀನಾಕ್ಷಿ ಅರೋರ ಮತ್ತು ಎಂ.ಎಸ್. ಶ್ಯಾಂಸುಂದರ್ ವಾದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments