Thursday, July 2, 2026
Homeಜಿಲ್ಲಾಸುದ್ದಿಪಾಪ ಮಾಡಿದವರು ಮಾತ್ರ ಮಹಾಕುಂಭಕ್ಕೆ ಹೋಗುತ್ತಾರೆ - ಚಂದ್ರಶೇಖರ್‌ ಆಜಾದ್‌ ವಿವಾದಾತ್ಮಕ ಹೇಳಿಕೆ

ಪಾಪ ಮಾಡಿದವರು ಮಾತ್ರ ಮಹಾಕುಂಭಕ್ಕೆ ಹೋಗುತ್ತಾರೆ – ಚಂದ್ರಶೇಖರ್‌ ಆಜಾದ್‌ ವಿವಾದಾತ್ಮಕ ಹೇಳಿಕೆ

Telegram Group
Join Now

ಉತ್ತರ ಪ್ರದೇಶ : ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಾಳೆಯಿಂದ ಆರಂಭವಾಗಲಿದೆ. ಇದಕ್ಕಾಗಿ ಎಲ್ಲ ಸಿದ್ಧತೆಗಳು ನಡೆದಿರುವ ನಡುವೆ, ಈ ವಿಚಾರವಾಗಿ ವಿವಾದಾತ್ಮಕ ಹೇಳಿಕೆಗಳು ಕೂಡಾ ಮುನ್ನೆಲೆಗೆ ಬರುತ್ತಿದೆ. ಆಜಾದ್ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ನಗೀನಾ ಲೋಕಸಭಾ ಕ್ಷೇತ್ರದ ಸಂಸದ ಚಂದ್ರಶೇಖರ್ ಆಜಾದ್ ನೀಡಿರುವ ಹೇಳಿಕೆಯೂ ವಿವಾದದ ಸ್ವರೂಪ ಪಡೆದಿದೆ.
ಪಾಪ ಮಾಡಿದವರು ಮಾತ್ರ ಮಹಾಕುಂಭಕ್ಕೆ ಹೋಗುತ್ತಾರೆ ಎಂದು ಚಂದ್ರಶೇಖರ್ ಹೇಳಿದ್ದಾರೆ. ನಾನು ಯಾವುದೇ ಪಾಪ ಮಾಡಿಲ್ಲ. ಹೀಗಾಗಿ ಈ ರೀತಿ ಸಾರ್ವಜನಿಕವಾಗಿ ಸ್ನಾನ ಮಾಡುವ ನಾಟಕ ಮಾಡುವುದಿಲ್ಲ ಎಂದಿದ್ದಾರೆ.
ತಮ್ಮ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಜರಾಗಲು ಸಹರಾನ್‌ಪುರ ನ್ಯಾಯಾಲಯಕ್ಕೆ ಬಂದಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಚಂದ್ರಶೇಖರ್ ಮಾತನಾಡಿ, ತಮ್ಮ ಆಜಾದ್ ಸಮಾಜ ಪಕ್ಷವು ಸಾವಿರಾರು ವರ್ಷಗಳಿಂದ ಧರ್ಮ ಮತ್ತು ಪಂಥದ ಹೆಸರಿನಲ್ಲಿ ಅವಮಾನಕ್ಕೊಳಗಾದ ಬಡವರು ಮತ್ತು ದುರ್ಬಲರ ಪರ ಹೋರಾಡುತ್ತಿದೆ. ಪ್ರಸ್ತುತ ಮಾಧ್ಯಮಗಳು, ಪೊಲೀಸ್ ಆಡಳಿತ ಮತ್ತು ನ್ಯಾಯಾಂಗವು ದುರ್ಬಲ ವರ್ಗದ ವಿರುದ್ಧ ನಿಂತಿದೆ ಎಂದು ತೋರುತ್ತದೆ ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments