Friday, March 27, 2026
Homebig breakingಸಂಕ್ರಾಂತಿ ದಿನವೇ ಭೀಕರ ಅಪಘಾತ - ಕ್ಯಾಂಟೀನ್‌ಗೆ ಲಾರಿ ಡಿಕ್ಕಿಯಾಗಿ ಮೂವರ ದುರ್ಮರಣ..!

ಸಂಕ್ರಾಂತಿ ದಿನವೇ ಭೀಕರ ಅಪಘಾತ – ಕ್ಯಾಂಟೀನ್‌ಗೆ ಲಾರಿ ಡಿಕ್ಕಿಯಾಗಿ ಮೂವರ ದುರ್ಮರಣ..!

ಸಕಲೇಶಪುರ : ಲಾರಿಯೊಂದು ರಸ್ತೆ ಬದಿಯ ಕ್ಯಾಂಟೀನ್‌ಗೆ ನುಗ್ಗಿದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟು ಹಲವು ಗಾಯಗೊಂಡಿರುವ ಘಟನೆ ಸಕಲೇಶಪುರ ತಾಲೂಕಿನ ಗುಳಗಳಲೆ ಗ್ರಾಮದಲ್ಲಿ ಸಂಭವಿಸಿದೆ.
ಚಿತ್ರದುರ್ಗ ಮೂಲದ ವೀರೇಶ್‌ ಮೃತ ವ್ಯಕ್ತಿ. ಮೃತರಾದ ಇನ್ನಿಬ್ಬರ ಗುರುತು ಪತ್ತೆಯಾಗಿಲ್ಲ. ಲಾರಿ ನುಗ್ಗಿದ ರಭಸಕ್ಕೆ ಕ್ಯಾಂಟೀನ್‌ ನೆಲಸಮವಾಗಿದೆ. ಕ್ಯಾಂಟೀನ್‌ನಲ್ಲಿ ಹಲವರು ಇದ್ದರು ಎನ್ನಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!