ಬೆಂಗಳೂರು : ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗೋದನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಅಂತ ವಿಧಾನ ಪರಿಷತ್ ಬಿಜೆಪಿ ಸದಸ್ಯ ಅಡಗೂರು ವಿಶ್ವನಾಥ್ ಹೇಳಿದ್ದಾರೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನ ಇಂದು ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ಡಿ.ಕೆ ಶಿವಕುಮಾರ್ ಸಿಎಂ ಆಗೋದನ್ನ ಯಾರು ತಪ್ಪಿಸಲು ಆಗಲ್ಲ. ಸುಮ್ಮನೆ ಇವರಿವರೇ ಐದು ವರ್ಷ ಸಿದ್ದರಾಮಯ್ಯ ಸಿಎಂ ಎನ್ನುತ್ತಿದ್ದಾರೆ. ಇದೆಲ್ಲ ಬಾಲಿಶತನ ಅಷ್ಟೇ… ಕಾಂಗ್ರೆಸ್ 136 ಸ್ಥಾನ ಬರಲು ಡಿ.ಕೆ ಶಿವಕುಮಾರ್ ಕೊಡುಗೆ ಇದೆ. ಎಲ್ಲದಕ್ಕೂ ಡಿಕೆಶಿಯದ್ದು ಖರ್ಚಾಗಿಲ್ವ? ಎಲೆಕ್ಷನ್ ಸಂದರ್ಭದಲ್ಲೇ ಆಗಿರುವ ಮಾತುಕತೆ ಇದು. ಡಿಕೆ ಶಿವಕುಮಾರ್ ಸಿಎಂ ಆಗೋದನ್ನ ಯಾರು ತಪ್ಪಿಸಲು ಆಗಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಅನವಶ್ಯಕವಾಗಿ ಸಿಎಂ ಹಬ್ಬಿಸುತ್ತಿರುವ ಗೋಜಲು. ಕಾಂಗ್ರೆಸ್ ಪಕ್ಷದ ನೇಮ್ ಅಂಡ್ ಫೇಮ್ ಹಾಳು ಮಾಡುತ್ತಿದ್ದಾರೆ. ಇವರೇನು ಕಾಂಗ್ರೆಸ್ ಕಟ್ಟಿದವರಲ್ಲವಲ್ಲ, ಅವರಿಗೇನು ಆಗಬೇಕು? ಅವರದ್ದು ಮುಗಿಯಿತಲ್ಲ ಎಂದು ಆರೋಪಿಸಿದರು.
ಡಿ.ಕೆ. ಶಿವಕುಮಾರ್ ಸಿಎಂ ಆಗೋದನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದ ಬಿಜೆಪಿ ನಾಯಕ..!
RELATED ARTICLES
