Sunday, August 16, 2026
Homeಆಧ್ಯಾತ್ಮಮೌನಿ ಅಮಾವಾಸ್ಯೆಗೆ ಪ್ರಯಾಗ್‌ರಾಜ್‌ಗೆ ಹರಿದು ಬರಲಿದೆ ಭಕ್ತ ಸಾಗರ - ಮಹತ್ವದ ಮನವಿ ಮಾಡಿದ ಅಯೋಧ್ಯೆ...

ಮೌನಿ ಅಮಾವಾಸ್ಯೆಗೆ ಪ್ರಯಾಗ್‌ರಾಜ್‌ಗೆ ಹರಿದು ಬರಲಿದೆ ಭಕ್ತ ಸಾಗರ – ಮಹತ್ವದ ಮನವಿ ಮಾಡಿದ ಅಯೋಧ್ಯೆ ರಾಮಮಂದಿರ ಟ್ರಸ್ಟ್..!

Telegram Group
Join Now

ಅಯೋಧ್ಯೆ : ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಪ್ರತಿ ದಿನ ಕೋಟ್ಯಂತರ ಮಂದಿ ಬರುತ್ತಿದ್ದಾರೆ. ಕುಂಭ ಮೇಳಕ್ಕೆ ಬರುವ ಮಂದಿ ಅಯೋಧ್ಯೆ ರಾಮಮಂದಿರ ಭೇಟಿಯ ಪ್ಲಾನ್‌ ಅನ್ನೂ ಹಾಕಿಕೊಂಡು ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಅಯೋಧ್ಯೆ ಕೂಡಾ ಭಕ್ತರಿಂದ ತುಂಬಿ ತುಳುಕುತ್ತಿದೆ.
ಈ ವರ್ಷ ಮೌನಿ ಅಮಾವಾಸ್ಯೆಯಂದು ಪ್ರಯಾಗ್‌ರಾಜ್ ಮಹಾ ಕುಂಭಮೇಳದಲ್ಲಿ 10 ಕೋಟಿಗೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಗಳಿವೆ. ಸಂಗಮ ಸ್ನಾನ ಮಾಡುವ ಸ್ಥಳದಲ್ಲಿ ದೊಡ್ಡ ಪ್ರಮಾಣದ ಜನದಟ್ಟಣೆ ಏರ್ಪಡುವ ಸಾಧ್ಯತೆ ಇದೆ. ಈ ನಡುವೆ ರಾಮಜನ್ಮ ಭೂಮಿ ಟ್ರಸ್ಟ್‌ ಮಹತ್ವವಾದ ಮನವಿಯೊಂದನ್ನು ಮಾಡಿದೆ. ಸ್ಥಳೀಯ ಭಕ್ತರು 15 ದಿನಗಳ ನಂತರ ಅಯೋಧ್ಯೆಗೆ ಬರಬೇಕು ಅಂತ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಸಂಪತ್ ರಾಯ್ ಮನವಿ ಮಾಡಿದ್ದಾರೆ.
ಜನವರಿ 29 ಮೌನಿ ಅಮಾವಾಸ್ಯೆಯಂದು ಕುಂಭಮೇಳದಲ್ಲಿ ಗಂಗೆಯಲ್ಲಿ ಸ್ನಾನ ಮಾಡುವ ಭಕ್ತರು ನಂತರ ಅಯೋಧ್ಯೆಯ ರಾಮಲಲ್ಲಾನ ದರ್ಶನ ಪಡೆಯಲು ಆಗಮಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ. ಕಳೆದ ಕೆಲವು ದಿನಗಳಿಂದ ಕುಂಭಮೇಳದಿಂದಾಗಿ ಆಯೋಧ್ಯೆಗೆ ಆಗಮಿಸುವ ಭಕ್ತರ ಸಂಖ್ಯೆಯೂ ಏರಿಕೆಯಾಗಿದೆ. ಇದರಿಂದ ರಾಮನಗರಿಯಲ್ಲೂ ಜನಸಂದಣಿ ಹಚ್ಚಾಗಿದೆ. ಜನವರಿ 29ರಂದು ಮೌನಿ ಅಮವಾಸ್ಯೆಯಾಗಿರುವ ಕಾರಣ ಸ್ಥಳೀಯರು ಸಹ ರಾಮ ಮಂದಿರಕ್ಕೆ ಆಗಮಿಸಿದ್ರೆ ಜನಸಂದಣಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಏಕಕಾಲದಲ್ಲಿ ಕೋಟ್ಯಂತರ ಜನರು ಬಂದ್ರೆ ಭಕ್ತರಿಗೆ ರಾಮ ಲಲ್ಲಾ ದರ್ಶನ ಮಾಡಿಸುವುದು ಕಷ್ಟಕರವಾಗಲಿದೆ ಎಂದು ಸಂಪತ್ ರಾಯ್ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments